ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸೋನಿಯಾ ಗಾಂಧಿ ಒಂದು ಹನಿ ನೀರು ಕರ್ನಾಟಕಕ್ಕೆ ಬಿಡುವುದಿಲ್ಲ ಅಂತ ಹೇಳಿದ್ರು ಅದು ಸರಿನಾ? ; ಮುನೇನಕೊಪ್ಪ ಟಾಂಗ್

ಹುಬ್ಬಳ್ಳಿ: ಕಾಂಗ್ರೆಸ್ ನ ಮೇಕೆದಾಟು ಕೇವಲ ರಾಜಕೀಯ ಉದ್ದೇಶಕ್ಕಾಗಿ. ಅದು ಮುಂದಿನ ಚುನಾವಣೆಗೆ ಮಾತ್ರ ಪಾದಯಾತ್ರೆ ಮಾಡುತ್ತಿದ್ದಾರೆ. ಜನರು ಎಲ್ಲವನ್ನ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರು ಅವರಿಗೆ ಪಾಠ ಕಲಿಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೋಸ್ಕರ ಮಾತ್ರ ಅದು ಪಾದಯಾತ್ರೆ, ಮಹದಾಯಿ ಸಮಯದಲ್ಲೂ ಇದೆ ಧೋರಣೆ ಇದೆ. ಆಗ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಒಂದು ಹನಿ ನೀರು ಕರ್ನಾಟಕಕ್ಕೆ ಬಿಡುವುದಿಲ್ಲ ಅಂತ ಹೇಳಿದ್ರು. ಮಹದಾಯಿ ಬಗ್ಗೆ ಸ್ಪಷ್ಟ ನಿಲುವು ಅವರಿಗಿಲ್ಲ. ಅದೇ ಜಿಲ್ಲೆಯಲ್ಲಿ ಅವರು ಏನೆಲ್ಲ ಕೆಲ್ಸ ಮಾಡಿದ್ದಾರೆ ಅಂತ ಗೊತ್ತಿಲ್ಲ. ಅಂತಿಮ ಸ್ವರೂಪಕ್ಕೆ ನಾವು ಕಳಸಾ ಬಂಡೂರಿ ಹೋರಾಟ ತಂದಿದ್ದೇವೆ. ಈಗಾಗಲೇ ಯಡಿಯೂರಪ್ಪ ಅವರು ಆ ಬಗ್ಗೆ ಹಣವನ್ನ ಬಜೆಟ್ ನಲ್ಲಿ ಮಿಸಲಿಟ್ಟಿದ್ದಾರೆ, ಮುಂದಿನ ದಿನದಲ್ಲಿ ಮಹದಾಯಿಗೆ ಅಂತಿಮ ಸ್ವರೂಪ ತರಲಿದ್ದೇವೆ ಎಂದರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

09/01/2022 03:28 pm

Cinque Terre

58.08 K

Cinque Terre

10

ಸಂಬಂಧಿತ ಸುದ್ದಿ