ಧಾರವಾಡ : ಪಂಚಮಸಾಲಿ ಮೀಸಲಾತಿಗೋಸ್ಕರ ನಡೆದ ಪಾದಯಾತ್ರೆಗೆ 14 ನೇ ತಾರೀಕಿನಂದು ಒಂದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಸುಕ್ಷೇತ್ರ ಕೂಡಲಸಂಗಮದಲ್ಲಿ ಪಂಚಮಸಾಲಿ ಮೀಸಲಾತಿ ಪಾದಯಾತ್ರೆ ವರ್ಷಚಾರಣೆಯ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು ತಿಳಿಸಿದರು.
ಗುರುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ವರ್ಷ ಹೋರಾಟದ ನೋವಿನ ವೇದನೆಯನ್ನು ಹಕ್ಕೊತ್ತಾಯದ ಮೂಲಕ ನಾವು ನೆರವೇರಿಸಿಕೊಳ್ಳುತ್ತೇವೆ. ಇನ್ನು ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಂದಲೇ ರಾಷ್ಟ್ರೀಯ ಬಸವ ಪೂಜ್ಯ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಇದೇ ವೇಳೆ ಸಿಹಿ ಸುದ್ದಿಯನ್ನು ಆಡಳಿತಾತ್ಮಕವಾಗಿ ಘೋಷಣೆ ಮಾಡಿದ್ರೂ ಆಶ್ಚರ್ಯ ಪಡಬೇಕಾಗಿಲ್ಲ. ಈ ಬಗ್ಗೆ ನಾವು ನಂಬಿಕೆ ಇಟ್ಟಿದ್ದೇವೆ. ಕೊನೆಪಕ್ಷ ಮುಖ್ಯಮಂತ್ರಿಗಳು ಬಜೆಟ್ ಒಳಗಾಗಿ ಸಿಹಿ ಸುದ್ದಿ ಕೊಡ್ತಾರೆ. ಇಲ್ಲ ಯುಗಾದಿಗಾದರೂ ಸಿಹಿ ಸುದ್ದಿ ಕೊಡ್ತಾರೆ. ಒಟ್ಟು ನಂಬಿಕೆ ವಿಶ್ವಾಸದ ಮೇಲೆ ನಮ್ಮ ಮೀಸಲಾತಿ ಹೋರಾಟವನ್ನು ನಿರಂತರವಾಗಿ ಮುಂದುವರೆಸುವ ಮೂಲಕ ಸರ್ಕಾರ ನಂಬಿಕೆ ಉಳಿಸಿಕೊಳ್ಳುವ ಭರವಸೆಯೊಂದಿಗೆ ಹೋರಾಟ ನಿರಂತರವಾಗಿ ಮಾಡಲಾಗುತ್ತಿದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/01/2022 11:15 am