ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅಕ್ರಮ ಮನೆಗಳ ಸಕ್ರಮ ಮಾಡುವಂತೆ ತಹಶೀಲ್ದಾರ್'ಗೆ ಮನವಿ

ಕುಂದಗೋಳ : ಸಂಶಿ ಗ್ರಾಮದ ರಿಜಿಸ್ಟರ್ ನಂಬರ್ 75,76,77,78 ಹಾಗೂ 652 ರಲ್ಲಿಯ ಸರಿ ಸುಮಾರು 45 ರಿಂದ 50 ವರ್ಷಗಳಿಂದ ವಾಸವಾಗಿರುವ ಅಕ್ರಮ ಮನೆಗಳನ್ನು ಸಕ್ರಮಗೊಳಿಸಿ ಪಂಚಾಯಿತಿ ಉತಾರ ಮಾಲೀಕರ ಕಾಲಂನಲ್ಲಿ ಕಬ್ಜಾದಾರರ ಹೆಸರನ್ನು ಸೇರಿಸಿ ಕೊಡುವಂತೆ 2017 ರಲ್ಲೇ ಗ್ರಾಮ ಪಂಚಾಯಿತಿಗೆ ಮನವಿ ಕೊಟ್ಟರು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇಂದು ಸಂಶಿ ಗ್ರಾಮಸ್ಥರು ತಹಶೀಲ್ದಾರ'ಗೆ ಮನವಿ ಸಲ್ಲಿಸಿದರು.

ಸಂಶಿ ಗ್ರಾಮಸ್ಥರು ಮನವಿ ಸಲ್ಲಿಸಿ ನಮಗೆ ಸರ್ಕಾರದಿಂದ ಅತಿವೃಷ್ಟಿ ಅನಾವೃಷ್ಟಿಗೆ ಸಿಗಬೇಕಾದ ಮೂಲ ಸೌಲಭ್ಯ ಸಿಗುತ್ತಿಲ್ಲ, ನಮ್ಮ ಅಕ್ರಮ ಮನೆಗಳನ್ನು ಸಕ್ರಮ ಮಾಡಿಕೊಡಿ ಎಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

Edited By : Nagesh Gaonkar
Kshetra Samachara

Kshetra Samachara

05/01/2022 06:35 pm

Cinque Terre

33.99 K

Cinque Terre

0

ಸಂಬಂಧಿತ ಸುದ್ದಿ