ಹುಬ್ಬಳ್ಳಿ: ಅಲೆಲೆಲೆ....ನಮ್ಮ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ನೋಡಿ ಇಲ್ಲಿ. ಮಾಸ್ಕ್ ಇಲ್ಲ. ಸಾಮಾಜಿಕ ಅಂತರವೂ ಇಲ್ಲ. ಅಷ್ಟಕ್ಕೂ ಇವರಿಗೆ ರೂಲ್ಸ್ ಅನ್ವಯವಾಗುವುದಿಲ್ಲ ಅನಸುತ್ತೆ. ಯಾಕ್ ಹೇಳಿ.. ಸರ್ಕಾರ ಅವರದ ಐತಿ ಅಲ್ರಿ.
ಹಾ. ಸರ್ಕಾರ ಒಮಿಕ್ರಾನ್ ಹೆಚ್ಚ ಆಗ್ತಿದೆ ಅಂತ ನೈಟ್ ಕರ್ಫ್ಯೂ ಮಾಡಿದೆ. ಮತ್ತೆ ಮುಂದಿನ ಸಭೆಯಲ್ಲಿ ಟಫ್ ರೂಲ್ಸ್ ಮಾಡುತ್ತಿದೆ. ಆದರೆ ಅದೇ ಬಿಜೆಪಿ ನಾಯಕರು ತಮ್ಮ ಸರ್ಕಾರ ಮಾಡಿದ ರೂಲ್ಸ್ ಗೆ ಡೋಂಟ್ ಕೇರ್ ಎನ್ನುತ್ತಿದ್ದಾರೆ ನೋಡ್ರೀ.
ಹೌದು. ಬಿಜೆಪಿಗರು ಪ್ರತಿಭಟನೆ ಗುಂಗಲ್ಲಿ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವಿಲ್ಲದೇ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸಂಸದ ಡಿ.ಕೆ.ಸುರೇಶ್ ವಿರುದ್ಧ ನಗರದ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಬಿಜೆಪಿಗರೇ ಮಾಸ್ಕ್ ಧರಿಸಿರಲಿಲ್ಲ. ಸಾಮಾನ್ಯ ಜನತೆ ಮಾಸ್ಕ್ ಧರಿಸದೇ ಇದ್ದರೇ ಅವರಿಗೆ ದಂಡ ವಿಧಿಸುತ್ತಿದ್ದಾರೆ. ಆದರೆ ಬಿಜೆಪಿಗರಿಗೆ ದಂಡ ವಿಧಿಸುವವರು ಯಾರು ? ಅನ್ನೋ ಪ್ರಶ್ನೆ ಈಗ ಸಾರ್ವಜನಿಕರಿಂದ ಕೇಳಿ ಬಂದಿದೆ. ಜನರಿಗೆ ಒಂದು ರೂಲ್ಸ್ ಇವರಿಗೊಂದ ರೂಲ್ಸ ನೋಡ್ರಿಪಾ...
Kshetra Samachara
04/01/2022 10:30 pm