ಹುಬ್ಬಳ್ಳಿ: ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೆಸುಗೂರು ಕನಕಗಿರಿ ಸಿಡಿಪಿಒ ಮಹಿಳಾ ಅಧಿಕಾರಿ ಜೊತೆಗೆ ಮಾತನಾಡಿದ ಫೋನ್ ಆಡಿಯೋ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಹೇಳಿದರು.
ನಗರದಲ್ಲಿಂದು ಈ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತರಹ ಶಾಸಕರು ಮಹಿಳೆಯ ಜೊತೆಗೆ ವರ್ತನೆ ಮಾಡಬಾರದಾಗಿತ್ತು. ಆದರೆ ಇದೀಗ ಘಟನೆ ನಡೆದು ಹೋಗಿದೆ. ಹಾಗಾಗಿ ಈ ಬಗ್ಗೆ ನಮ್ಮ ವರಿಷ್ಠರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.
Kshetra Samachara
04/01/2022 02:33 pm