ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಜಿ ಸಿಎಂ ಶೆಟ್ಟರ್ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ

ಹುಬ್ಬಳ್ಳಿ: ಹುಬ್ಬಳ್ಳಿ ನಗರದ ವಿವಿಧ ವಾರ್ಡುಗಳಲ್ಲಿ ಇಂದು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಭೂಮಿ ಪೂಜೆ ನೆರವೇರಿಸಿದರು.

ವಾರ್ಡ್‌ ನಂಬರ್ 44 ರ ಶಬರಿ ನಗರದಲ್ಲಿ ಪಾಲಿಕೆ ಅನುದಾನದಡಿ 42 ಲಕ್ಷ ರೂ.ವೆಚ್ಚದಲ್ಲಿ ತೆರೆದ ಚರಂಡಿ ಕಾಮಗಾರಿ,ವಾರ್ಡ್ ನಂಬರ್ 59 ರಲ್ಲಿ 40 ಲಕ್ಷ ರೂ.ವೆಚ್ಚದಲ್ಲಿ ನವೀನ್ ಪಾರ್ಕ್ ಕಂಪೌಂಡ್ ನಿರ್ಮಾಣ ಕಾಮಗಾರಿ,19.50 ಲಕ್ಷ ರೂ.ವೆಚ್ಚದಲ್ಲಿ ಎಸ್.ಎಲ್.ಎನ್.ಎಸ್ಟೇಟ್‌ನಲ್ಲಿ ಮುಖ್ಯ ರಸ್ತೆಯ ಡಾಂಬರೀಕರಣ ಕಾಮಗಾರಿ,ವಾರ್ಡ್‌ ನಂಬರ್ 47 ರ ಲೋಕಪ್ಪನ ಹಕ್ಕಲದಲ್ಲಿ 30 ಲಕ್ಷ ರೂ.ವೆಚ್ಚದಲ್ಲಿ ಪೇವರ್ಸ್ ಅಳವಡಿಕೆ,ವಾರ್ಡ 39 ರಲ್ಲಿ 16 ಲಕ್ಷ ರೂ.ವೆಚ್ಚದಲ್ಲಿ ಚಾಮುಂಡೇಶ್ವರಿ ನಗರದ ರಸ್ತೆ ಡಾಂಬರೀಕರಣ ,4 ಲಕ್ಷ ರೂ.ವೆಚ್ಚದಲ್ಲಿ ತೆರೆದ ಚರಂಡಿ ನಿರ್ಮಾಣ, ವಾರ್ಡ್ 40 ರಲ್ಲಿ 33 ಲಕ್ಷ ರೂ.ವೆಚ್ಚದಲ್ಲಿ ಮಹಾಲಕ್ಷ್ಮಿ ಲೇಔಟ್ ರಸ್ತೆ ಹಾಗೂ 34 ಲಕ್ಷ ರೂ ವೆಚ್ಚದಲ್ಲಿ ಸಪ್ತಗಿರಿ ಲೇಔಟ್ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ,ಉಮಾ ಮುಕುಂದ್,ಶಂಕರ ಸುಂಕದ,ನಿಜಗುಣ ದೇವೂರು,ಮಲ್ಲಿಕಾರ್ಜುನ ಸಾವ್ಕಾರ್,ಸುವರ್ಣ ಕಲಕುಂಟ್ಲ,ವಿರೂಪಾಕ್ಷ ರಾಯನಗೌಡ್ರ,ವಸಂತ ಹೊರಟ್ಟಿ,ನೀಲಕಂಠ ಆಕಳವಾಡಿ,ಗೋವಿಂದ ಜೋಶಿ ಮತ್ತಿತರರು ಇದ್ದರು.

Edited By :
Kshetra Samachara

Kshetra Samachara

02/01/2022 05:46 pm

Cinque Terre

15.36 K

Cinque Terre

2

ಸಂಬಂಧಿತ ಸುದ್ದಿ