ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಐದು ತಿಂಗಳಾದರೂ ಮೇಯರ್-ಉಪಮೇಯರ್ ಇಲ್ಲ: ಇನ್ನೂ ಎಷ್ಟು ವರ್ಷ ಹೋಗುತ್ತದೆಯೋ...?

ಹುಬ್ಬಳ್ಳಿ: ಆ ಅವಳಿನಗರದ ಪಾಲಿಕೆಗೆ ಮೇಯರ್ ಉಪಮೇಯರ್ ಆಯ್ಕೆ ಈಗ ಕಗ್ಗಂಟಾಗಿದೆ. ಚುನಾವಣೆ ನಡೆದು ಐದು ತಿಂಗಳು ಕಳೆದದ್ದು, ಮೇಯರ್ ಉಪಮೇಯರ್ ಆಯ್ಕೆ ನಡೆಯುತ್ತಿಲ್ಲ, ಮೇಯರ್ ಆಯ್ಕೆ ವಿಚಾರ ಅಧಿಕಾರಿಗಳಲ್ಲಿಯೇ ಗೊಂದಲ ಸೃಷ್ಟಿಸಿದೆ. ಯಾಕೆ ಅಂತಿರಾ ಈ ವರದಿ ನೋಡಿ.

ಇದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ. ಎರಡುವರೆ ವರ್ಷದ ಬಳಿಕ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಚುನಾಯಿತ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಚುನಾವಣೆ ನಡೆದು ನೂತನ ಪಾಲಿಕೆ ಸದಸ್ಯರು ಆಯ್ಕೆಯಾಗಿ ಐದು ತಿಂಗಳು ಕಳೆಯುತ್ತಿದ್ರು ಮೇಯರ್ ಉಪಮೇಯರ್ ಆಯ್ಕೆ ಮಾತ್ರ ನಡೆದಿಲ್ಲ. ನೂತನ ಸದಸ್ಯರು ಪ್ರಮಾಣವಚನ ಸ್ವೀಕಾರವು ನಡೆದಿಲ್ಲ. ಇದಕ್ಕೆಲ್ಲ ಕಾರಣ ಪಾಲಿಕೆಯ ಅವಧಿ ವಿಚಾರ ಅಧಿಕಾರಿಗಳಲ್ಲಿ ಗೊಂದಲ ಸೃಷ್ಟಿಸಿದೆ. ಈ ವಿಚಾರಕ್ಕೆ ಸ್ಪಷ್ಟಿಕರಣ ಕೋರಿ ಇಲಾಖೆಗೆ ಪತ್ರ ಬರೆಯಲಾಗಿದೆ. ಪಾಲಿಕೆ ಅವದಿ ಇಪ್ಪತ್ತೊಂದೊ..? ಇಪತ್ಮೂರೊ ಎನ್ನುವ ಗೊಂದಲ ಎದುರಾಗಿದೆ. ಈ ಮಧ್ಯೆ ಮೇಯರ್‌-ಉಪಮೇಯರ್, ಹುದ್ದೆಗಳ ಮೀಸಲಾತಿ ಕುರಿತು ಪಾಲಿಕೆ ಅಧಿಕಾರಿಗಳಲ್ಲೂ ಗೊಂದಲ ಸೃಷ್ಟಿಯಾಗಿದೆ. ಪಾಲಿಕೆಗೆ 2019 ಮಾರ್ಚ್ ನಿಂದ 2021 ಸೆಪ್ಟೆಂಬರ್ ವರೆಗೆ ಚುನಾಯಿತ ಮಂಡಳಿ ‌ಇರಲಿಲ್ಲ. 2019 ರಲ್ಲಿ ಕೊನೆಗೊಂಡ ಹಿಂದಿನ ಮೇಯರ್ ಸಾಮಾನ್ಯ ಮತ್ತು ಉಪಮೇಯರ್‌ ಹಿಂದುಳಿದ ಅ ವರ್ಗ ಮಹಿಳೆಗೆ ಮೀಸಲಾತಿ ನಿಗದಿಯಾಗಿತ್ತು. ಈ ಮೀಸಲಾತಿ 20ನೇ ಅವಧಿಯದ್ದು ಎಂದು ನಗರಾಭಿವೃದ್ಧಿ ಇಲಾಖೆ ಜನವರಿ ಒಂದು 2018ರಂದು ಮೀಸಲಾತಿ ಕುರಿತು ಹೊರಡಿಸಿರುವ ಗೆಜೆಟ್ ನಲ್ಲಿ ಸ್ಪಷ್ಟಪಡಿಸಲಾಗಿದೆ. ಹಾಗೆಯೇ ಇಲಾಖೆ ಜನವರಿ 2018 ರಂದು ರಾಜ್ಯ ಪತ್ರದಲ್ಲಿ ಮುಂದಿನ ಅವಧಿಗೆ ಮೇಯರ್ -ಉಪಮೇಯರ್ ಸ್ಥಾನಗಳನ್ನು , ಸಾಮಾನ್ಯ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲು ನಿಗದಿ ಪಡಿಸಿದೆ.

ಇನ್ನೂ ಮೇಯರ್- ಉಪಮೇಯರ್ ಆಯ್ಕೆಗೆ ಸರಕಾರದಿಂದ ಅಧಿಸೂಚನೆ ಹೊರಬಿದ್ದಿಲ್ಲ. ಫೆಬ್ರವರಿ 2021 ರಂದು ಗಜೆಟ್ ನಲ್ಲಿ ಪ್ರಕಟಗೊಂಡ ಮೀಸಲು ಪ್ರಕಾರ 23 ನೇ ಅವಧಿ ಎಂದು ಸ್ಪಷ್ಟಪಡಿಸಲಾಗಿದೆ. 2019-20 ಹಾಗೂ 2020-21 ಸಾಲಿನಲ್ಲಿ ಚುನಾಯಿತ ಮಂಡಳಿ ಇಲ್ಲದ್ದರಿಂದ ಮೇಯ‌ರ-ಉಪಮೇಯರ್ ಆಯ್ಕೆಗೆ ಪ್ರಮೇಯವೇ ಇರಲಿಲ್ಲ. ಹಾಗಾಗಿ ಈ ಎರಡು ವರ್ಷಗಳ ಅವಧಿಯನ್ನು ಶೂನ್ಯ ಎಂದು ಪರಿಗಣಿಸಲಾಗುತ್ತಿದೆಯೋ ಅಥವಾ ಮುಂದುವರಿದ ಅವಧಿ ಗಳು ಎಂದು ಗಣನೆಗೆ ತೆಗೆದುಕೊಳ್ಳಲಾಗುತ್ತದೆಯೇ ಎನ್ನುವ ಗೊಂದಲ ಸೃಷ್ಟಿಯಾಗಿದೆ.

Edited By : Nagesh Gaonkar
Kshetra Samachara

Kshetra Samachara

01/01/2022 07:08 pm

Cinque Terre

29.7 K

Cinque Terre

4

ಸಂಬಂಧಿತ ಸುದ್ದಿ