ಹುಬ್ಬಳ್ಳಿ: ಅಣ್ಣಿಗೇರಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 13 ಸ್ಥಾನ ಗೆದ್ದು ಅಧಿಕಾರ ಹಿಡಿಯುವುಲ್ಲಿ ಸಫಲವಾಗಿದೆ. ನಾಲ್ಕು ವರ್ಷಗಳಿಂದ ಬಿಜೆಪಿ ಆಡಳಿತ ನೋಡಿ ಜನರು ಬೇಸತ್ತು, ಕಾಂಗ್ರೆಸ್ ಪರ ಮತ ಹಾಕಿ ಅಧಿಕಾರ ನೀಡಿದೆ ಎಂದು ಕಾಂಗ್ರೆಸ್ ಮುಖಂಡ ಎನ್.ಎಚ್.ಕೋನರೆಡ್ಡಿ ಹೇಳಿದರು.
ನಗರದಲ್ಲಿಂದು ಮಾತಾನಾಡಿದ ಅವರು, ನಾನು ಜಿಡಿಎಸ್ ನಲ್ಲಿದ್ದಾಗ ಪುರಸಭೆ ಚುನಾವಣೆಯಲ್ಲಿ 10 ಸೀಟ್ ಬಂದಿದ್ದವು, ಈಗ ನಡೆದ ಪುರಸಭೆ ಚುನಾವಣೆಯಲ್ಲಿ 13 ಸ್ಥಾನ ಪಡೆಯುವ ಮೂಲಕ ಜಯ ಸಾಧಿಸಿದೆ. ಪಕ್ಷೇತರ ಅಭ್ಯರ್ಥಿಗಳು ಸಹ ನಮಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಆದಷ್ಟು ಅನೌನ್ಸ್ ಮಾಡಬೇಕು ಎಂದು ಸರಕಾರಕ್ಕೆ ಒತ್ತಾಯ ಮಾಡಿದರು.
Kshetra Samachara
01/01/2022 05:27 pm