ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೇಂದ್ರ ಸಚಿವ ಜೋಶಿ ಹತ್ತು ತಲೆ ರಾವಣ-ಶಾಸಕರನ್ನು ಹರಾಜು ಮಾಡಿ ಆಕ್ರೋಶ

ಹುಬ್ಬಳ್ಳಿ: ಎಂಇಎಸ್ ಸಂಘಟನೆ ಬ್ಯಾನ್ ಮಾಡುವಂತೆ ವಿವಿಧ ಸಂಘಟನೆ ಕಾರ್ಯಕರ್ತರು ಇಂದು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಿದರು. ಶಾಸಕರಾದ ಅಭಯ ಪಾಟೀಲ, ರಮೇಶ್‌ ಜಾರಕಿಹೊಳಿ, ಅವರ ಭಾವಚಿತ್ರವನ್ನು ಹರಾಜು ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹತ್ತು ತಲೆ ರಾವಣ. ಅವರು ಕನ್ನಡಿಗರ ವಿರೋಧಿ ನೀತಿ ಅನುಸರಿಸಿದ್ದಾರೆ ಎಂದು ಕರ್ನಾಟಕ ನವ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷರುಈರಪ್ಪ ಎಮ್ಮಿ ದೂರಿದ್ದಾರೆ.

ಇದೇ ಸಮಯದಲ್ಲಿಯೇ ಎಲ್ಲಾ ಸಂಸದರ ಹಾಗೂ ಶಾಸಕರ ಭಾವಚಿತ್ರ ಹರಾಜು ಮಾಡಿ, ಪ್ರತಿಕೃತಿ ದಹನ ಮಾಡಿ, ವಿವೀಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕೂಡಲೇ ರಾಜ್ಯ ಸರಕಾರ ಎಮ್ ಎಂಇಎಸ್ ಸಂಘಟನೆ ಬ್ಯಾನ್ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಕೂಡ ಎಚ್ಚರಿಕೆ ಎಚ್ಚರಿಸಿವೆ.

Edited By : Nagesh Gaonkar
Kshetra Samachara

Kshetra Samachara

31/12/2021 03:43 pm

Cinque Terre

78.07 K

Cinque Terre

8

ಸಂಬಂಧಿತ ಸುದ್ದಿ