ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಸಾಸ್ವಿಹಳ್ಳಿ ಗ್ರಾ.ಪಂ ಫಲಿತಾಂಶ; ನಾಲ್ಕು ಅಭ್ಯರ್ಥಿಗಳು ಜಯಭೇರಿ

ಅಣ್ಣಿಗೇರಿ : ಅಣ್ಣಿಗೇರಿ ತಾಲ್ಲೂಕಿನ ಸಾರ್ವತ್ರಿಕ ಗ್ರಾಮ ಪಂಚಾಯತಿಯ ಚುನಾವಣೆಯ 11 ಸ್ಥಾನಗಳಲ್ಲಿ ಈಗಾಗಲೇ 7 ಅಭ್ಯರ್ಥಿಗಳು ಜಯಶೀಲರಾಗಿದ್ದು, ಬಾಕಿ ಉಳಿದ ಸಾಸ್ವಿಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಕೊಂಡಿಕೊಪ್ಪ ಗ್ರಾಮದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 4 ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ.

ಗೆಲುವಿನ ನಗೆ ಬೀರಿದ ಅಭ್ಯರ್ಥಿಗಳಾದ ದೇವಕ್ಕ ಕುರಿ ( ಸಾಮಾನ್ಯ ಮಹಿಳೆ ), ಶೇಷಗಿರಿ ಕಿರೆಸೂರ ( ಹಿಂದುಳಿದ ಬ ವರ್ಗ ), ಶಕುಂತಲಾ ಮಾಡಳ್ಳಿ ( ಸಾಮಾನ್ಯ ಮಹಿಳೆ ), ಜಗದೀಶ ವೆಂಕನಗೌಡ ( ಸಾಮಾನ್ಯ ) ಈ ನಾಲ್ಕು ಅಭ್ಯರ್ಥಿಗಳು ಜಯಶೀಲಾರಾಗುತ್ತಿದ್ದಂತೆ ಗ್ರಾಮದಲ್ಲಿ ಪಟಾಕಿ ಸಿಡಿಸಿ, ಸಂಭ್ರಮ ಪಟ್ಟರೆ. ಪಟ್ಟಣದ ಶ್ರೀ ಅಮೃತೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದ ಆಚೆ ಬೆಂಬಲಿಗರ ಸಂಭ್ರಮ ಮುಗಿಲು ಮುಟ್ಟಿತ್ತು.

Edited By : Nagesh Gaonkar
Kshetra Samachara

Kshetra Samachara

30/12/2021 05:52 pm

Cinque Terre

105.61 K

Cinque Terre

0

ಸಂಬಂಧಿತ ಸುದ್ದಿ