ಧಾರವಾಡ: ಧಾರವಾಡ ತಾಲೂಕಿನ ಮಾರಡಗಿ ಗ್ರಾಮ ಪಂಚಾಯ್ತಿಗೆ ನಡೆದ ಚುನಾವಣಾ ಮತ ಎಣಿಕೆ ಧಾರವಾಡದ ತಹಶೀಲ್ದಾರ ಕಚೇರಿಯಲ್ಲಿ ನಡೆಯುತ್ತಿದ್ದು, ಮೂವರು ಅಭ್ಯರ್ಥಿಗಳ ಗೆಲುವನ್ನು ಈಗಾಗಲೇ ಘೋಷಣೆ ಮಾಡಲಾಗಿದೆ.
ಕಾರಣಾಂತರಗಳಿಂದ ಮಾರಡಗಿ ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಮುಂದೂಡಲಾಗಿತ್ತು. ಮೊನ್ನೆಯಷ್ಟೇ ಈ ಗ್ರಾಮ ಪಂಚಾಯ್ತಿಗೆ ಚುನಾವಣೆ ನಡೆಸಲಾಗಿತ್ತು.
ಒಟ್ಟು 17 ಸದಸ್ಯರ ಬಲಾಬಲ ಇರುವ ಮಾರಡಗಿ ಗ್ರಾಮ ಪಂಚಾಯ್ತಿಗೆ ಒಟ್ಟು 63 ಜನ ಸ್ಪರ್ಧೆ ಮಾಡಿದ್ದರು. ಇದೀಗ ಮೂವರು ಅಭ್ಯರ್ಥಿಗಳ ಗೆಲುವು ಘೋಷಣೆಯಾಗಿದ್ದು, ಬಾಕಿ ಇರುವ ಅಭ್ಯರ್ಥಿಗಳ ಹಣೆಬರಹ ಇನ್ನಷ್ಟೇ ಗೊತ್ತಾಗಬೇಕಿದೆ.
Kshetra Samachara
30/12/2021 03:52 pm