ಕಲಘಟಗಿ: ವಿಧಾನ ಪರಿಷತ್ ನಲ್ಲಿ ಈಗಾಗಲೇ ತನ್ನ ಹಿಡಿತ ಸಾಧಿಸಿರುವ ಬಿಜೆಪಿ,ಪರಿಷತ್ ಸಭಾಪತಿ ಹುದ್ದೆಯ ಮೇಲೆ ಕಣ್ಣೀಟ್ಟಿದೆ.
ಸದ್ಯ ಸಭಾಪತಿ ಹುದ್ದೆಗೆ ಕುತ್ತು ಬಂದರೆ ರಾಜೀನಾಮೆ ನೀಡಲು ಸಿದ್ದ ಎಂದು ವಿಧಾನ್ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.
ಕಲಘಟಗಿಯ ಶಾಸಕ ಸಿ.ಎಂ.ನಿಂಬಣ್ಣವರ ಮನೆಯಲ್ಲಿ ಮಾತನಾಡಿದ ಅವರು ಜೆಡಿಎಸ್,ಬಿಜೆಪಿ ಸಹಕಾರದಿಂದ ನಾನು ಸಭಾಪತಿಯಾಗಿದ್ದೇನೆ ಅವರು ಬೇಡ ಎಂದ್ರೆ ನಾನು ರಾಜೀನಾಮೆ ಕೊಡಲು ಸಿದ್ದ ಎಂದಿದ್ದಾರೆ.
ಬಹುಮತ ಬಂದಿದೆ ಎಂದು ಪೀಠಾಧಿಪತಿ ಸ್ಥಾನದಿಂದ ಕೆಳಗೆ ಇಳಿಸುವುದು ಸೂಕ್ತವಲ್ಲ.ಹಾಗಾಗಿ ಒಂದೆರಡು ಬಾರಿ ಆತರಹ ಆಗಿದೆ ಹೊರತು ಅದನ್ನ ನಾನು ವಿರೋಧಿಸುತ್ತಾ ಬಂದಿದ್ದೇನೆ,ಹಾಗಾಗಿ ಆಡಳಿತರೂಢ ಪಕ್ಷದವರು ಬೇಡ ಎಂದರೆ ರಾಜೀನಾಮೆ ಕೊಡುವೆ ಎಂದರು. ಅಲ್ಲದೇ ಇಂದು ಪುರಸಭೆ,ಪಟ್ಟಣ ಪಂಚಾಯತಿ ಚುನಾವಣಾ ಫಲಿತಾಂಶದ ಕುರಿತು ಕೇಳಿದ ಪ್ರಶ್ನೆಗೆ ನಾನು ರಾಜಕೀಯ ಮಾತನಾಡೋದಿಲ್ಲಾ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/12/2021 02:33 pm