ಅಣ್ಣಿಗೇರಿ ; ಪಟ್ಟಣದ ಶ್ರೀ ಅಮೃತೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪಟ್ಟಣದ ಪುರಸಭೆಯ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಾರಂಭವಾಗಿರುತ್ತದೆ.
ಒಟ್ಟು 6 ಟೇಬಲ್ ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, 1ನೇ ಟೇಬಲ್ ನಲ್ಲಿ ವಾರ್ಡ್ ನಂಬರ್ 1,3,5,7 2ನೇ ಟೇಬಲ್ ನಲ್ಲಿ 2,4,6,8 3ನೇ ಟೇಬಲ್ ನಲ್ಲಿ 9,11,13,15 4ನೇ ಟೇಬಲ್ ನಲ್ಲಿ 10,12,14,16 5ನೇ ಟೇಬಲ್ ನಲ್ಲಿ 17,19,21,23 6ನೇ ಟೇಬಲ್ ನಲ್ಲಿ 18,20,22 ವಾಡಗಳ ಮತ ಎಣಿಕೆ ನಡೆಯುತ್ತಿರುತ್ತದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿರುತ್ತಾರೆ.
ಇತ್ತ ಕಡೆ ಮತ ಎಣಿಕೆ ಪ್ರಾರಂಭವಾಗುತ್ತಿದ್ದಂತೆ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದ್ದು, ಆವರಣದ ಆಚೆ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ನಿಂತುಕೊಂಡು ಫಲಿತಾಂಶಕ್ಕಾಗಿ ಕಾಯ್ತಿದ್ದಾರೆ. ಮೊದಲಿಗೆ ಯಾವ ವಾರ್ಡಿನ ಫಲಿತಾಂಶ ಹೊರ ಬೀಳುತ್ತದೆ ಎಂಬುದು ಕಾದು ನೋಡಬೇಕಾಗಿದೆ.
Kshetra Samachara
30/12/2021 08:46 am