ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಖಾಲಿ ಇಲ್ಲದ ಸೀಟ್ ಗೆ ಟವಲ್ ಹಾಕುವ ಮೂಲಕ ಅಧಿಕಾರದ ಬಗ್ಗೆ ತಿರುಕನ ಕನಸನ್ನು ಕಾಣುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ನಗರದಲ್ಲಿಂದು ಕಾರ್ಯಕಾರಣಿ ಸಭೆಯ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿಯೇ ಆಗಲಿ ಅಥವಾ ರಾಷ್ಟ್ರದಲ್ಲಿಯೇ ಆಗಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದರು.
ಕಾಂಗ್ರೆಸ್ ನಾಯಕರು ಕೈಯಲ್ಲಿ ಅಧಿಕಾರ ಇದ್ದಾಗ ಮೇಕೆ ತಿನ್ನಲು ಹೋಗಿದ್ದರು. ಅಧಿಕಾರ ಇಲ್ಲದಾಗ ಮೇಕೆದಾಟು ಗಮನಕ್ಕೆ ಬಂದಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯವಾಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/12/2021 03:24 pm