ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇಂದ್ರ ಸರ್ಕಾರದ ವಿರುದ್ಧ ಜವಳಿ ವ್ಯಾಪಾರಸ್ಥರ ಆಕ್ರೋಶ: ಪ್ರತಿಭಟನಾ ರ‍್ಯಾಲಿ !

ಹುಬ್ಬಳ್ಳಿ: ಕೇಂದ್ರ ಸರ್ಕಾರ ಬಟ್ಟೆಗಳ ಮೇಲೆ ಜಾರಿಗೆ ತಂದ ಟ್ಯಾಕ್ಸ್ ವಿರೋಧಿಸಿ ವಾಣಿಜ್ಯನಗರಿ ಹುಬ್ಬಳ್ಳಿಯ

ಜವಳಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿಯ ದುರ್ಗದಬೈಲ್‌ನಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ವ್ಯಾಪಾರಸ್ಥರು, ಕೇಂದ್ರ ಸರ್ಕಾರ 5% ರಿಂದ 12% ಏರಿಕೆ ಮಾಡಿದೆ. ಮೊದಲು ಟೆಕ್ಸ್ ಟೈಲ್ ಮೇಲೆ ಯಾವುದೇ ಟ್ಯಾಕ್ಸ್ ಇರಲಿಲ್ಲ. ಕೇಂದ್ರ ಸರ್ಕಾರ ನಾಲ್ಕು ವರ್ಷಗಳ ಹಿಂದೆ 5% ಜೆಎಸ್‌ಟಿ ಹಾಕಿತು. ಈಗ ಅದನ್ನು 12% ಏರಿಕೆ ಮಾಡಿ ವ್ಯಾಪಾರಸ್ಥರನ್ನ ಸಂಕಷ್ಟಕ್ಕೆ ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಕಳೆದ ಎರಡೂ ವರ್ಷಗಳಿಂದ ವ್ಯಾಪಾರ ಇಲ್ಲ. ಈಗ ಮತ್ತೆ 12% ಏರಿಕೆ ಮಾಡಿ ನಮ್ಮ ವ್ಯಾಪಾರವನ್ನ ಹಾಳು ಮಾಡಲು ಹೊರಟಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು 5% ಮುಂದುವರೆಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ ಕಾರ್ಯಕರ್ತರು, ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.

Edited By :
Kshetra Samachara

Kshetra Samachara

29/12/2021 01:36 pm

Cinque Terre

10.64 K

Cinque Terre

3

ಸಂಬಂಧಿತ ಸುದ್ದಿ