ಅಣಿಗೇರಿ : ಪಟ್ಟಣದಲ್ಲಿ ಡಿಸೆಂಬರ್ 27 ರಂದು ನಡೆದ ಪುರಸಭೆ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಇದೇ ಡಿಸೆಂಬರ್ 30ರಂದು ಅಂದರೆ ನಾಳೆ ಮತ ಎಣಿಕೆಯ ಕಾರ್ಯ ಪ್ರಾರಂಭವಾಗಲಿದೆ. ಸದ್ಯ ಮತ ಪೆಟ್ಟಿಗೆಗಳು ಪೊಲೀಸ್ ಭದ್ರತೆಯೊಂದಿಗೆ ಶ್ರೀ ಅಮೃತೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇರಿಸಲಾಗುತ್ತಿದೆ.
ಇತ್ತ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಪ್ರಾರಂಭವಾಗಿದ್ದು, ಡಿಸೆಂಬರ್ 27 ರ ಸಾಯಂಕಾಲದಿಂದಲೇ ಅಭ್ಯರ್ಥಿಗಳು ತಮ್ಮ ತಮ್ಮ ಲೆಕ್ಕಾಚಾರದಲ್ಲಿ ತಲೆ ಕೆಡಿಸಿಕೊಂಡಿದ್ದಾರೆ. ಎಣಿಕೆಯ ದಿನ ಯಾವಾಗ ಬರುತ್ತದೆ ಎಂದು ಬಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಪಟ್ಟಣದಲ್ಲಿ ಈಗಾಗಲೇ ಆ ಅಭ್ಯರ್ಥಿ ಗೆಲ್ಲುತ್ತಾನೆ ಈ ಅಭ್ಯರ್ಥಿ ಗೆಲ್ಲುತ್ತಾನೆ ಎಂಬ ಲೆಕ್ಕಾಚಾರದಲ್ಲಿ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಸ್ಥಳೀಯ ಮುಖಂಡರಿಂದ ರಾಷ್ಟ್ರೀಯ ಪಕ್ಷದ ಮುಖಂಡರಿಗೂ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ರಾಷ್ಟ್ರೀಯ ಪಕ್ಷದ ನಾಯಕರು ತಲೆ ಕೆಡಿಸಿಕೊಳ್ಳುವಂತಾಗಿದೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಚುನಾವಣೆ ಅತೀ ಮುಖ್ಯವಾಗಿರುವುದರಿಂದ ಇಲ್ಲಿನ ಮಾಜಿ ಮತ್ತು ಹಾಲಿ ಶಾಸಕರಿಗೆ ತಮ್ಮ ತಮ್ಮ ಪ್ರತಿಷ್ಠೆಯಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಒಟ್ಟಾರೆಯಾಗಿ ವಿಜಯದ ಮಾಲೆ ಯಾರ ಕೊರಳಿಗೆ ಬೀಳುತ್ತದೆ ಎಂಬುದು ನಾವು ನೀವು ಡಿಸೆಂಬರ್ 30 ರವರೆಗೆ ಕಾಯಿಲೆ ಬೇಕಾಗಿದೆ.
Kshetra Samachara
29/12/2021 09:48 am