ಹುಬ್ಬಳ್ಳಿ: ರಾಜ್ಯ ಬಿಜೆಪಿ ಕಾರ್ಯಕಾರಿಣಿಗೆ ಚಾಲನೆ ಸಿಕ್ಕಿದೆ. ಇಂದು ಮತ್ತು ನಾಳೆ ಕಾರ್ಯಕಾರಣಿ ನಡೆಯಲಿದ್ದು, ಕಾರ್ಯಕಾರಣಿ ಯಲ್ಲಿ ನಾಯಕರ ಕೊರತೆ ಎದ್ದು ಕಾಣುತ್ತಿತ್ತು. ಬಹುತೇಕ ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಗೈರಾಗಿರುವುದು ಕಾರ್ಯಕಾರಣಿ ಬಗ್ಗೆ ನಾಯಕರಲ್ಲಿನ ನಿರುತ್ಸಾಹ ತೋರಿಸಿತು.
ಹೌದು. ಬಿಜೆಪಿ ಕಾರ್ಯಕಾರಿಣಿಯತ್ತ ಮುಖ ಮಾಡದ ಜಾರಕಿಹೊಳಿ ಬ್ರದರ್ಸ್ ಸಭೆಯಿಂದ ದೂರ ಉಳಿದಿದ್ದಾರೆ. ಕಾರ್ಯಕಾರಿಣಿಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕಾದವರೇ ದೂರ ಉಳಿದಿರುವದು ಕಂಡು ಬಂತು. ಬೆಳಗಾವಿ ಭಾಗದ ನಾಯಕರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಕಾರ್ಯಕಾರಿಣಿಗೆ ಗೈರಾಗಿದ್ದಾರೆ.
ಕಾರ್ಯಕಾರಿಣಿಯಲ್ಲಿ ಬೆಳಗಾವಿ ಫಲಿತಾಂಶಂದ ಕುರಿತ ಪ್ರಮುಖ ಚರ್ಚೆ ನಡೆಯಲಿದೆ. ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿನ ಪರಾಮರ್ಶೆ ನಡೆಯಲಿದೆ. ಆದರೆ ಜಾರಕಿಹೊಳಿಯವರು ದೆಹಲಿಗೆ ಹೋಗಿರುವುದಾಗಿ ಆಪ್ತವಲಯದಿಂದ ಮಾಹಿತಿ ಲಭ್ಯವಾಗಿದೆ. ಇನ್ನೂ ಸಮಿತಿ ರಚಿಸಿ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದ್ದಾರೆ. ಆದರೆ ಜಾರಕಿಹೋಳಿ ಬ್ರದರ್ಸ್ ಗೈರಾಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿ ಕಟ್ಟಿ ಬೆಳೆಸಿದವರು ಬಿ.ಎಸ್.ಯಡಿಯೂರಪ್ಪ. ಆದರೆ, ಮುಖ್ಯಮಂತ್ರಿ ಸ್ಥಾನ ಹೋದ ಬಳಿಕ ಯಡಿಯೂರಪ್ಪ ಪಕ್ಷದ ಪ್ರಮುಖ ಸಭೆ ಸಮಾರಂಭಗಳಿಂದ ದೂರ ಉಳಿಯುತ್ತಿದ್ದಾರೆ. ಆದರೆ ಅವರ ಪುತ್ರರಾದ ಸಂಸದ ರಾಘವೇಂದ್ರ ಹಾಗೂ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಕೂಡ ಗೈರಾಗಿದ್ದಾರೆ. ಇನ್ನೂ ಯಡಿಯೂರಪ್ಪ ದುಬೈ ಟೂರ್ ನಲ್ಲಿದ್ದಾರೆ.
Kshetra Samachara
28/12/2021 06:39 pm