ಹುಬ್ಬಳ್ಳಿ: ಉತ್ಸಾಹ ಭರಿತವಾಗಿ, ಉಲ್ಲಾಸ ಭರಿತವಾದ ವಾತಾವರಣದಲ್ಲಿ ಕಾರ್ಯಕಾರಿಣಿ ಸಭೆ ನಡೆದಿದೆ.
ನಮ್ಮ ಯಶ್ವಸಿ ಮುಖ್ಯಮಂತ್ರಿ, ರಾಜ್ಯ ಉಸ್ತುವಾರಿ ಅರುಣಸಿಂಗ್, ನಳೀನಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆ ನಡೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಸಭೆಯ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರಮುಖ ಅಂಶಗಳ ಬಗ್ಗೆ ಅಂಕಿ ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ. ನಮ್ಮ ಸರ್ಕಾರ ಹಾಗೂ ಸಂಘಟನೆ ಒಳ್ಳೆಯ ಕೆಲಸ ನಡೆಯುತ್ತಿದೆ. ಸೇವೆ ಮತ್ತು ಸಂಘಟನೆ ಒಟ್ಟಿಗೆ ನಡೆಯಬೇಕು. ಬರೀ ಅರೋಪ ಪತ್ಯಾರೋಪದ ಮೇಲೆ ನಡೆಯಬಾರದು. ಕೋವಿಡ್ ಹಿನ್ನೆಲೆಯಲ್ಲಿ ಕಡಿಮೆ ಸದಸ್ಯರ ಮೂಲಕ ಸಭೆ ನಡೆದಿದೆ ಎಂದರು.
ಸ್ಥಳೀಯ ಸಂಸ್ಥೆಗಳ ಸಭೆ. ವಿಧಾನ ಪರಿಷತ್ ಚುನಾವಣೆ ಬಗ್ಗೆ ಮಾಹಿತಿ ಪಡೆದ ನಂತರ ಕೋರ ಕಮೀಟಿಯಲ್ಲಿ ಚರ್ಚೆ ನಡೆಯಲಿದೆ. ಬಿಎಸ್ ಯಡಿಯೂರಪ್ಪರು ವಿದೇಶದಲ್ಲಿ ಇದ್ದಾರೆ. ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಎಲ್ಲ ಸಂಸದರು, ಕೇಂದ್ರ ಸಚಿವರು ಇರಲ್ಲ.
ರಾಜ್ಯ ಕಾರ್ಯಕಾರಿಣಿಯಲ್ಲಿ ಎಲ್ಲ ಸಚಿವರು ಶಾಸಕರು ಇರಲ್ಲ. ಈ ಸಭೆಯ ದಿನಾಂಕ ಮೊದಲೇ ನಿಗದಿಯಾಗಿತ್ತು. ಮಾಧ್ಯಮವರು ಯಾವುದೇ ರೀತಿಯಲ್ಲೂ ಸುದ್ದಿ ಹುಡುಕಲು ಹೋಗಬೇಡಿ ಎಂದು ಮನವಿ ಮಾಡಿದರು.
ಜಾರಕಿಹೊಳಿಯವರು ಕಾರ್ಯಕಾರಿಣಿಯಲ್ಲಿ ಇಲ್ಲ. ಸಂಪುಟ ವಿಸ್ತರಣೆಯ ಬಗ್ಗೆ ಇಲ್ಲಿ ಚರ್ಚೆ ಆಗಲ್ಲ. ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಮಾಡಿ ಆ ಬಗ್ಗೆ ಸಿಎಂ ನಿರ್ಧಾರ ಮಾಡಲಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಹತ್ತು ಭಾರಿ ಈಗಾಗಲೇ ಹೇಳಿದ್ದೇವೆ. 2023 ರ ಚುನಾವಣೆಯನ್ನು ಸಹ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆಸಲಾಗುವುದು ಎಂದು ಅವರು ಹೇಳಿದರು.
ಮತಾಂತರ ನಿಷೇಧ ಕಾನೂನು ಜಾರಿ ಮಾಡಿದಕ್ಕೆ ಸಿಎಂಗೆ ಇಂದಿನ ಸಭೆಯಲ್ಲಿ ಅಭಿನಂದನೆ ಸಲ್ಲಿಸಿದ್ದೇವೆ. ಮುಂದೆ ಪರಿಷತ್ ನಲ್ಲಿ ಜಾರಿ ಮಾಡಲಾಗುವುದು. ಈ ಕಾನೂನು ಎಲ್ಲ ಕಾನೂನಿನಂತೆ ಜಾರಿಯಾಗಲಿದೆ. ಕಠಿಣವಾಗಿ ಜಾರಿ ಆಗಬೇಕು ಎಂದು ಕೇಂದ್ರ ಸಚಿವ ಜೋಶಿ ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/12/2021 06:23 pm