ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಗ್ರಾಪಂ ಚುನಾವಣೆ ಮತದಾನ ಪ್ರಕ್ರಿಯೆ ಆರಂಭ

ಕುಂದಗೋಳ : ಇತ್ತಿಚೆಗೆ ತೆರವಾದ ಕುಂದಗೋಳ ತಾಲೂಕಿನ ಪಶುಪತಿಹಾಳ, ಮಳಲಿ, ಯಲಿವಾಳ, ಗೌಡಗೇರಿ ಗ್ರಾಮ ಪಂಚಾಯಿತಿಗಳಿಗೆ ಇಂದು ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಮತದಾರರು ಮತಗಟ್ಟೆ ಕಡೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಲು ಮುಂದಾಗಿದ್ದಾರೆ.

ಪಶುಪತಿಹಾಳ ಗ್ರಾಮ ಪಂಚಾಯಿತಿ 9 ಸದಸ್ಯತ್ವದ ಸ್ಥಾನ, ಮಳಲಿ 11 ಸದಸ್ಯತ್ವ ಸ್ಥಾನ, ಅಕಾಲಿಕವಾಗಿ ತೆರವಾದ ಗೌಡಗೇರಿ, ಯಲಿವಾಳ ತಲಾ ಒಂದೊಂದು ಸ್ಥಾನಗಳಿಗೆ ಇಂದು ಚುನಾವಣೆ ಪ್ರಕ್ರಿಯೆ ನಡೆದಿದ್ದು ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಆದ್ಯತೆ ಪ್ರಕಾರ ಮತದಾನ ನಡೆದಿದೆ.

ಚುನಾವಣೆ ನಡೆಯುವ ಮತಗಟ್ಟೆ ಸುತ್ತಲೂ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಮತಗಟ್ಟೆ ಆಗಮಿಸುವ ಪ್ರತಿಯೊಬ್ಬ ಮತದಾರನಿಗೂ ಥರ್ಮಲ್ ಸ್ಕ್ಯಾನಿಂಗ್ ಪರೀಕ್ಷೆ ಹಾಗೂ ಸ್ಯಾನಿಟೈಜರ್ ಹಾಕಿ ಮತಗಟ್ಟೆ ಒಳಗಡೆ ಬಿಡಲಾಗುತ್ತಿದ್ದು ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಮುಂದುವರೆದಿದೆ.

Edited By : Shivu K
Kshetra Samachara

Kshetra Samachara

27/12/2021 12:20 pm

Cinque Terre

26.69 K

Cinque Terre

0

ಸಂಬಂಧಿತ ಸುದ್ದಿ