ಧಾರವಾಡ: ಮತಾಂತರ ನಿಷೇಧ ಕಾಯ್ದೆಯ ಬಿಲ್ ಪಾಸಾದರೆ ಆ ಕಾಯ್ದೆ ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿ ಆಗೇ ಆಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದು ಕಾಂಗ್ರೆಸ್‌ನವರೇ ಮೊದಲು ಅಂದುಕೊಂಡಿದ್ದರು. ಈಗ ಅವರೇ ಇದಕ್ಕೆ ವಿರೋಧ ಮಾಡುತ್ತಿದ್ದಾರೆ. ಬಹುಶಃ ಸೋನಿಯಾ ಗಾಂಧಿ ಅವರ ಮಾತು ಕೇಳಿ ಅವರು ಈ ರೀತಿ ವಿರೋಧ ಮಾಡುತ್ತಿರಬಹುದು ಎಂದು ಜೋಶಿ ಅವರು ಈ ಸಂದರ್ಭದಲ್ಲಿ ವ್ಯಂಗ್ಯವಾಡಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಬಗ್ಗೆ ವಿರೋಧ ಪಕ್ಷದವರು ಹೇಳಿದ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಜೋಶಿ, ಯಾವುದೇ ಒಬ್ಬ ವ್ಯಕ್ತಿ ಪೀಠದ ಮೇಲೆ ಕುಳಿತುಕೊಂಡರೆ ಅವರಿಗೆ ಒಂದು ಗೌರವ ಇರುತ್ತದೆ. ಅವರ ಬಗ್ಗೆ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾತೇ ಇಲ್ಲ. ಅದೊಂದು ಬೇಸ್‌ಲೆಸ್ ಹೇಳಿಕೆ ಎಂದರು.
Kshetra Samachara
26/12/2021 04:03 pm