ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ ಪುರಸಭೆ: ಚುನಾವಣೆ ಸಕಲ ಸಿದ್ಧತೆ

ಅಣ್ಣಿಗೇರಿ: ಇಲ್ಲಿನ ಪುರಸಭೆ ಚುನಾವಣೆ ಡಿಸೆಂಬರ್ 27 ಸೋಮವಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತದಿಂದ ಸ್ಥಳೀಯ ಶ್ರೀ ಅಮೃತೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಸಕಲ ಸಿದ್ದತೆಯನ್ನು ಮಾಡಿಕೊಂಡಿರುತ್ತಾರೆ.

ಪಟ್ಟಣದ 23 ವಾರ್ಡ್ ಗಳಿಗೆ ನಡೆಯುವ ಪುರಸಭೆ ಚುನಾವಣೆಗೆ ಅಧಿಕಾರಿಗಳು 23ಬೂತ್ ಗಳನ್ನಾಗಿ ವಿಭಾಗಿಸಿದ್ದು, ಈಗಾಗಲೇ ಚುನಾವಣೆಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದಾರೆ. ಒಟ್ಟು 161 ಸಿಬ್ಬಂದಿಗಳು ಚುನಾವಣೆಯ ಪ್ರಕ್ರಿಯೆಗೆ ನಿಯೋಜನೆ ಗೊಂಡಿದ್ದು, ಒಂದು ಮತಗಟ್ಟೆಗೆ 5ನೇ ಅಧಿಕಾರಿಗಳು ಇಬ್ಬರು ಪೊಲೀಸರಂತೆ ನಿಯೋಜಿಸಲಾಗಿದೆ.

ಇನ್ನೂ ತಾಲೂಕಿನಲ್ಲಿ ಮೂರು ಗ್ರಾಮ ಪಂಚಾಯಿತಿ ಚುನಾವಣೆಗಳ ನಡೆದಿದ್ದು, ಗ್ರಾಮಗಳಾದ ಶಲವಡಿ, ಇಬ್ರಾಹಿಂಪುರ್, ಸಾಸ್ವಿಹಳ್ಳಿ ಗ್ರಾಮ ಪಂಚಾಯತಿ ಚುನಾವಣೆಗೆ 5 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಒಂದು ಮತ ಕೇಂದ್ರಕ್ಕೆ 5 ಜನ ಚುನಾವಣೆ ಅಧಿಕಾರಿಗಳು 2 ಜನ ಪೊಲೀಸರನ್ನು ನಿಯೋಜಿಸಲಾಗಿದ್ದು, ಒಟ್ಟು 35 ಜನ ಸಿಬ್ಬಂದಿಗಳನ್ನು ಚುನಾವಣೆಯ ಪ್ರಕ್ರಿಯೆಗೆ ನಿಯೋಜನೆಗೊಂಡಿದ್ದಾರೆ ಎಂದು ಚುನಾವಣೆಯ RO ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಚುನಾವಣೆಗೆ ನಿಯೋಜನೆಗೊಂಡ ಎಲ್ಲ ಅಧಿಕಾರಿಗಳು ತಮ್ಮ ತಮ್ಮ ಮತಗಟ್ಟೆಗೆ ತೆರಳುತ್ತಾರೆ.

ಚುನಾವಣೆಯ ಭದ್ರತೆಯ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದು ಅಣ್ಣಿಗೇರಿ ಠಾಣಾಧಿಕಾರಿ ಲಾಲಸಾಬ ಜೂಲಕಟ್ಟಿ ಪಬ್ಲಿಕ್ ನೆಸ್ಟ್ ಗೆ ತಿಳಿಸಿದರು.

Edited By : Nagesh Gaonkar
Kshetra Samachara

Kshetra Samachara

26/12/2021 03:16 pm

Cinque Terre

57.78 K

Cinque Terre

0

ಸಂಬಂಧಿತ ಸುದ್ದಿ