ಹುಬ್ಬಳ್ಳಿ:ನಿನ್ನೆ ಪರಿಷತ್ ನ ವಿಪಕ್ಷ ಸದಸ್ಯರ ವರ್ತನೆ ಬಹಳ ನೋವು ತಂದಿದೆ. ನನ್ನ ತೇಜೋವಧೆ ಮಾಡುವ ನಿಟ್ಟಿನಲ್ಲಿ ಮಾತನಾಡಿದ್ದು ನನಗೆ ಬಹಳ ನೋವು ಆಯ್ತು, ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಈ ತರಹದ ಮಾತುಗಳನ್ನ ಕೇಳಿರಲಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿಂದು ಮಾತಾನಾಡಿದ ಅವರು, ಪರಿಷತ್ ವಿ ಪಕ್ಷ ಸದಸ್ಯರು ನನ್ನನ್ನ ಏಜೆಂಟ್ ಅಂದರು, ಅದು ಬೇಸರ ತರಿಸಿತು. ಆದರೆ ನಂತರ ಅವರು ಕ್ಷಮೆ ಕೇಳಿದ್ದಾರೆ. ಹೀಗಾಗಿ ಪ್ರಕರಣ ಇತ್ಯರ್ಥವಾಗಿದೆ. ಫೆಬ್ರುವರಿಯಲ್ಲಿ ಜಂಟಿ ಸದನ ಕರೆಯುತ್ತೇವೆ. ಒಂದು ವಾರದ ನಂತರ ಬಜೆಟ್ ಅಧಿವೇಶನ ನಡೆಯುತ್ತದೆ ಎಂದರು.
Kshetra Samachara
25/12/2021 12:59 pm