ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಅಧಿಕಾರ ತನ್ನಿ ನಿಮಗೆ 24 ಗಂಟೆ ನೀರು ಕೊಡುತ್ತೇವೆ : ಸಚಿವ ಜೋಶಿ

ಅಣ್ಣಿಗೇರಿ: ಪುರಸಭೆಯಲ್ಲಿ ಅಧಿಕಾರಕ್ಕೆ ಬಂದರೆ ಪಟ್ಟಣದ ಜನತೆಗೆ 24 ಗಂಟೆ ಕುಡಿಯುವ ನೀರು ಪೂರೈಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದರು.

ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಅವರು, 24 ತಾಸು ಕುಡಿಯುವ ನೀರಿನ ಯೋಜನೆಗಾಗಿ ಅಣ್ಣಿಗೇರಿ ಪಟ್ಟಣಕ್ಕೆ 54 ಕೋಟಿ ಬಿಡುಗಡೆಯಾಗಿರುತ್ತದೆ ಎಂದು ಹೇಳಿದರು.

ಉಸ್ತುವಾರಿ ಸಚಿವರಾದ ಶಂಕರ್ ಪಾಟೀಲ್ ಮಾತನಾಡಿ, ನಿಮ್ಮೆಲ್ಲರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಕೇಂದ್ರದಲ್ಲಿ ಪ್ರಹ್ಲಾದ್ ಜೋಷಿಯವರನ್ನು ಲೋಕಸಭೆಯ ಸದಸ್ಯರನ್ನಾಗಿ ಮಾಡಿದ್ದೀರಿ. ಆದರೆ ಅಣ್ಣಿಗೇರಿಯಲ್ಲಿ ಎಲ್ಲೋ ಒಂದು ಕಡೆ ನಮ್ಮನ್ನು ಕೈ ಬಿಡುತ್ತಿದ್ದೀರಿ, ಆದರೆ ಆ ರೀತಿ ಆಗಬಾರದು. ಪಟ್ಟಣ ಜನರು ಕಮಲವನ್ನು ಯಾವತ್ತು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಅದೇ ರೀತಿ ಈ ಚುನಾವಣೆಯಲ್ಲೂ ಎತ್ತರಕ್ಕೆ ಏರಿಸುತ್ತಿರುವ ಎಂಬ ದೃಢವಾದ ವಿಶ್ವಾಸವಿದೆ ಎಂದು ಹೇಳಿದರು.

ಇನ್ನು ಈ ಸಂದರ್ಭದಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಬಸವರಾಜ ಕುಂದಗೋಳ ಮಠ, ಷಣ್ಮುಖ ಗುರಿಕಾರ, ಈರಣ್ಣ ಜಡಿ, ದಾನಪ್ಪ ಗೌಡರ್, ಸ್ಥಳೀಯ ಮುಖಂಡರು ಪಕ್ಷದ ಅಭ್ಯರ್ಥಿಗಳು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

25/12/2021 12:29 pm

Cinque Terre

23.47 K

Cinque Terre

41

ಸಂಬಂಧಿತ ಸುದ್ದಿ