ಕುಂದಗೋಳ : ತಾಲೂಕಿನ ಯರಗಪ್ಪಿ ಗ್ರಾಮ ಪಂಚಾಯಿತಿ ಎಸಗಿರುವ ಅವ್ಯವಹಾರ ವಿರುದ್ಧ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳೇ ಮನವಿ ಮಾಡಿದ್ರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇಂದು ಗ್ರಾಮಸ್ಥರು ಹಾಗೂ ರಿ ಪಬ್ಲಿಕ್'ನ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಕುತುಬುದ್ದೀನ್ ಬೆಳಗಲಿ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡದ ಎದುರು ಸಾರ್ವಜನಿಕರು ಧರಣಿ ಕೈಗೊಂಡಿದ್ದಾರೆ.
ಯರಗುಪ್ಪಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೃಷಿಹೊಂಡ ನಿರ್ಮಾಣ ಮಾಡದೇ ಬಿಲ್ ತೆಗೆದಿದ್ದಾರೆ, ಅದಲ್ಲದೆ ಒಬ್ಬರ ಹೆಸರಲ್ಲಿ ನಾಲ್ಕು ಸಾರ್ವಜನಿಕ ಶೌಚಾಲಯ ಮಂಜೂರು ಮಾಡಿ ಗ್ರಾಮದಲ್ಲಿ ಸಿಸಿ ರಸ್ತೆ, ಸಿಡಿ ನಿರ್ಮಾಣ, ಚರಂಡಿ ನಿರ್ಮಾಣದ ಹೆಸರಿನಲ್ಲಿ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ.
ಇಂದು ಯರಗುಪ್ಪಿ ಗ್ರಾಮ ಪಂಚಾಯಿತಿ ಎದುರು ಮಹಾತ್ಮಾ ಗಾಂಧೀಜಿ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗ್ರಾಮಸ್ಥರು ಧರಣಿ ಕೈಗೊಂಡಿದ್ದಾರೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇಷ್ಟೋಂದು ಅವ್ಯವಹಾರ ನಡೆದರೂ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಕ್ರಮ ಕೈಗೊಂಡಿಲ್ಲಾ ಎಂದು ಆರೋಪಿಸುತ್ತಿದ್ದಾರೆ.
Kshetra Samachara
24/12/2021 03:09 pm