ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಠಾಧೀಶರ ಒತ್ತಾಯಕ್ಕೆ ಮಣಿಯಬೇಡಿ, ಶಾಲಾ ಮಕ್ಕಳಿಗೆ ಮೊಟ್ಟೆ ನೀಡಿ

ಧಾರವಾಡ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ವಿತರಿಸಬಾರದು ಎಂಬ ಮಠಾಧೀಶರ ಹೇಳಿಕೆ ವಿರೋಧಿಸಿ ಸಮತಾ ಸೇನಾ ಸದಸ್ಯರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಮೊಟ್ಟೆ ಸಮೇತ ಪ್ರತಿಭಟನೆ ನಡೆಸಿದರು.

ಮಕ್ಕಳ ಅಪೌಷ್ಟಿಕತೆ ಹೊಗಲಾಡಿಸುವ ಒಳ್ಳೆಯ ಉದ್ದೇಶದಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಮೊಟ್ಟೆಯನ್ನು ವಿತರಣೆ ಮಾಡಲಾಗುತ್ತಿದೆ.‌ ಆದರೆ, ಕೆಲವು ಸ್ವಾಮೀಜಿಗಳು ಬೇಧಭಾವ ಹುಡುಕುವ ಪ್ರಯತ್ನ ಮಾಡುತ್ತಿದ್ದು, ಇದು ಎಷ್ಟರ ಮಟ್ಟಿಗೆ ಸರಿ ಇದೆ ಎಂದು ಮೊಟ್ಟೆ ವಿರೋಧಿಗಳು ಒಮ್ಮೆ ತಮ್ಮನ್ನು ತಾವು ಕೇಳಿಕೊಳ್ಳಬೇಕು.‌ ಮಕ್ಕಳ ದೈಹಿಕ ಬೆಳವಣಿಗೆಗೆ ಮೊಟ್ಟೆಯು ಸಹಕಾರಿಯಾಗಿದೆ. ಹಾಗಾಗಿ‌‌ ಮಕ್ಕಳ ಆರೋಗ್ಯ ದೃಷ್ಟಿಯಿಂದ ರಾಜ್ಯ ಸರ್ಕಾರ ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ವಿತರಣೆಯನ್ನು ಮುಂದುವರೆಸಬೇಕು. ಮಠಾಧೀಶರ ಒತ್ತಡಕ್ಕೆ ಸರ್ಕಾರ ಮಣಿಯಬಾರದು. ವಾರ ಪೂರ್ತಿ‌‌ ಮಕ್ಕಳಿಗೆ ಮೊಟ್ಟೆ ವಿತರಣೆಯ ಕಡೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

Edited By : Manjunath H D
Kshetra Samachara

Kshetra Samachara

21/12/2021 01:57 pm

Cinque Terre

34.6 K

Cinque Terre

3

ಸಂಬಂಧಿತ ಸುದ್ದಿ