ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಪಟ್ಟಣದಲ್ಲಿ ಚುರುಕಾದ ಪುರಸಭೆ ಚುನಾವಣೆ ಪ್ರಚಾರ

ಅಣ್ಣಿಗೇರಿ : ಕಳೆದ ಎರಡೂವರೆ ವರ್ಷಗಳಿಂದ ಪಟ್ಟಣದ ಪುರಸಭೆ ಚುನಾವಣೆ ನೆನೆಗುದಿಗೆ ಬಿದ್ದಿದ್ದು, ಡಿಸೆಂಬರ್ 27 ರಂದು ಚುನಾವಣೆ ನಡೆಯಲಿದೆ. ಈಗಾಗಲೇ ಎಲ್ಲ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ಸೇರಿದಂತೆ ಪಕ್ಷೇತರರು ತಮ್ಮ ತಮ್ಮ ವಾರ್ಡಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಕಳೆದ ಬಾರಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಸೇರಿ ಮೈತ್ರಿಯಾಗಿ ಅಧಿಕಾರ ನಡೆಸಿದ್ದವು.

ಆದರೆ ಈ ಬಾರಿ ಜೆಡಿಎಸ್ ಪಕ್ಷದಿಂದ ಮಾಜಿ ಶಾಸಕ ಏನ್. ಹೆಚ್. ಕೋನರೆಡ್ಡಿ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿದ್ದಾರೆ, ಹಾಗೂ ಪಕ್ಷದಿಂದ 23 ವಾರ್ಡುಗಳ ಪೈಕಿ 11 ಅಭ್ಯರ್ಥಿಗಳು ಮಾತ್ರ ಕಣದಲ್ಲಿ ಇರುವುದರಿಂದ ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಇತ್ತಕಡೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಮತದಾರರನ್ನು ಸೆಳೆಯಲು ಹಲವಾರು ತರಹದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಬಿರುಸಿನ ಪ್ರಚಾರ ಮಾಡುವ ಮುಖಾಂತರ ಬಿಜಿ ಯಾಗಿದ್ದಾರೆ.ಪಟ್ಟಣದ ಮತದಾರರು ಎಲ್ಲವನ್ನೂ ನೋಡುತ್ತಿದ್ದು ಡಿಸೆಂಬರ್ 27 ಮತದಾನ ನಡೆಯುತ್ತಿರುವುದರಿಂದ ಯಾವ ಅಭ್ಯರ್ಥಿಗೆ ಮತ ನೀಡುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.

Edited By : Nagaraj Tulugeri
Kshetra Samachara

Kshetra Samachara

20/12/2021 06:28 pm

Cinque Terre

9.44 K

Cinque Terre

0

ಸಂಬಂಧಿತ ಸುದ್ದಿ