ಹುಬ್ಬಳ್ಳಿ: ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರ ರಾಣಿ ಚನ್ನಮ್ಮನ 108 ಅಡಿ ಪ್ರತಿಮೆಯನ್ನು ಬೆಳಗಾವಿ ಸುವರ್ಣ ಸೌಧದ ಬಳಿ ರಾಜ್ಯ ಸರ್ಕಾರ ನಿರ್ಮಿಸಬೇಕು ಎಂದು ಕರ್ನಾಟಕ ಕುರುಬ ಎಸ್.ಟಿ ಹೋರಾಟ ಸಮಿತಿ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ನಾಮಕರಣ ಮಾಡಬೇಕು ಅಂತಲೂ ಮುಖ್ಯಮಂತ್ರಿ ಅವರಿಗೆ ಇದೇ ದಿನಾಂಕ 22 ರಂದು ಶಿವಾನಂದ ಮುತ್ತಣ್ಣವರ ಮನವಿ ಕೊಡಲಿದ್ದಾರೆ.
ಬೇಡಿಕೆ ಈಡೇರಿಸುವಂತ ಆಗ್ರಹಿಸಿ ಇದೇ ದಿನವೇ ಬೈಕ್ ರ‍್ಯಾಲಿ ಯನ್ನು ಹಮ್ಮಿಕಳ್ಳಲಾಗಿದೆ ಎಂದು ಮುತ್ತಣ್ಣವರ ವಿವರಿಸಿದ್ದಾರೆ.
Kshetra Samachara
20/12/2021 04:01 pm