ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ ಪುರಸಭೆ ಚುನಾವಣೆಯ 14ನೇ ವಾರ್ಡಿನ ಕಮಲ ಪಾಳಯದ ಅಭ್ಯರ್ಥಿ

ಅಣ್ಣಿಗೇರಿ : ಅಣ್ಣಿಗೇರಿ ಅಮೃತೇಶ್ವರನ ಆಶೀರ್ವಾದ, ಬಿಜೆಪಿ ಪಕ್ಷ ವರಿಷ್ಠರ ಗೌರವ ತಂದೆ ಶಿವಯೋಗೆಪ್ಪ ಸುರಕೋಡ ಅಭಿವೃದ್ಧಿ ಸಾಧನೆ ಫಲದಿಂದ ಇಲ್ಲೊಬ್ಬ ಯುವಕ ಪುರಸಭೆ ಚುನಾವಣೆ ಮೂಲಕ ರಾಜಕೀಯ ರಂಗಕ್ಕೆ ಕಾಲಿಟ್ಟಿದ್ದಾರೆ.

ಆ ಮೂಲಕ ನೊಂದವರ, ಬಡವರ, ಮಧ್ಯಮ ವರ್ಗದವರ ಧ್ವನಿಯಾಗಿ, ಸಾಮಾಜಿಕ ಕೆಲಸಗಾರನಾಗಿ, ವೃದ್ಧರ ಅಂಗವಿಕಲರ ಸೇವಕನಾಗಿ ಈ ಬಾರಿ ಅಣ್ಣಿಗೇರಿ ಪುರಸಭೆ ಚುನಾವಣೆಯ 14ನೇ ವಾರ್ಡಿನಿಂದ ರಾಷ್ಟ್ರೀಯ ಪಕ್ಷ ಬಿಜೆಪಿ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಅಣ್ಣಿಗೇರಿ ಪುರಸಭೆ ಚುನಾವಣೆಯ ಅಭ್ಯರ್ಥಿಗಳಲ್ಲೇ ಅತಿ ಕಿರಿಯನಾದ ಬಿಎ ಪದವೀಧರ ವೀರೇಶ್ ಸುರಕೋಡ ಅಣ್ಣಿಗೇರಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ರಕ್ತದಾನ ಶಿಬಿರ, ಸ್ವಚ್ಚ ಭಾರತ್ ಕಾರ್ಯಕ್ರಮ, ಶಿದ್ಧಲಿಂಗೇಶ್ವರ ಹವ್ಯಾಸ ಸಂಘದ ಮೂಲಕ ಸಾಮಾಜಿಕ ಸೇವೆ ಮಾಡುತ್ತಾ ನಿಮ್ಮಲ್ಲಿ ಒಬ್ಬರಾಗಿ ಈ ಬಾರಿ 14ನೇ ವಾರ್ಡ್ ಅಭ್ಯರ್ಥಿಯಾಗಿ ರಾಜಕೀಯ ಸೇವೆಗೆ ಮುಂದಾಗಿ ನಿಮ್ಮ ಅತ್ಯ ಅಮೂಲ್ಯವಾದ ಮತ ಕೇಳುತ್ತಿದ್ದಾರೆ.

ಕೇವಲ ಸಾಮಾಜಿಕ ಸೇವೆ ಮಾತ್ರವಲ್ಲ ಆರ್.ಎಸ್.ಎಸ್ ಮೂಲಕವೂ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸಿದ ವೀರೇಶ್ ಸುರಕೋಡ, ಅಣ್ಣಿಗೇರಿ ಪಟ್ಟಣದ ಮಾಜಿ ಪುರ ಸಭೆ ಅಧ್ಯಕ್ಷ ಅಭಿವೃದ್ಧಿ ಹರಿಕಾರ ಶಿವಯೋಗೆಪ್ಪ ಸುರಕೋಡ ಅವರ ಮಗ ಅವರಂತೆ ಉತ್ಸಾಹಿ ಕೆಲಸಗಾರ.

ರಾಜಕೀಯ ರಂಗಕ್ಕೆ ನೀನೆ ಸೂಕ್ತ ವ್ಯಕ್ತಿ ಎಂದು ಜನರೇ ರೂಪಿಸಿದ ನೇತಾರನಾದ ವೀರೇಶ್ ಸುರಕೋಡ, ಸಾಮಾಜಿಕ ಕೆಲಸಗಳ ಮೂಲಕ ಹೆಸರಾಗಿ ಅಣ್ಣಿಗೇರಿ ಪಟ್ಟಣದಲ್ಲಿ ತಮ್ಮದೇ ಒಂದು ಸ್ನೇಹಲೋಕ ಕಟ್ಟಿಕೊಂಡು ಜನಹಿತ ಜನಪರ ಕೆಲಸಗಳ ರೂವಾರಿ ಆಗಿದ್ದಾರೆ.

ಒಟ್ಟಾರೆ ತನ್ನ ಅಭಿವ್ಯಕ್ತಿ ಕೆಲಸ, ಜನಪರ ಪ್ರೀತಿ, ವಿಶ್ವಾಸ, ಸಹಾಯದ ಮೂಲಕ ಹೆಸರಾದ ನಿಮ್ಮ ಮನೆ ಮಗ ವೀರೇಶ್ ಸುರಕೋಡ ಮೇಲೆ ಜನಾಶೀರ್ವಾದ ಅಚ್ಚಳಿಯದೆ ಇರಲಿ.

Edited By : Shivu K
Kshetra Samachara

Kshetra Samachara

20/12/2021 01:16 pm

Cinque Terre

34.89 K

Cinque Terre

2

ಸಂಬಂಧಿತ ಸುದ್ದಿ