ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಎಂ.ಇ.ಎಸ್ ನಡೆಗೆ, ಜಯಕರ್ನಾಟಕ ಆಕ್ರೋಶ ಕಿಡಿ

ಅಣ್ಣಿಗೇರಿ : ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆ ಪುಂಡರಿಂದ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ಸ್ಥಳೀಯ ತಾಲ್ಲೂಕು ಘಟಕದ ಜಯ ಕರ್ನಾಟಕ ಸಂಘಟನೆಯ ತೀರ್ವ ಖಂಡಿಸಿ, ಅಣ್ಣಿಗೇರಿ ಪಟ್ಟಣದ ಪುರಸಭೆ ಹತ್ತಿರ ಹೋರಾಟದ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಸುಧೀರ್ ಮುಧೋಳ ಮಾತನಾಡಿ, ಡಿಸೆಂಬರ್ 17 12 2021 ರಂದು ದೇಶ ಪ್ರೇಮಿ ಸ್ವತಂತ್ರ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಭಗ್ನಗೊಳಿಸಿ, ಧ್ವಜಕ್ಕೆ ಬೆಂಕಿ ಹಚ್ಚಿದ್ದಾರೆ. ಬೆಳಗಾವಿಯಲ್ಲಿ ಈ ಕೃತ್ಯ ನಡೆದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮಾಯನವರ ಮಾತನಾಡಿ, ದುಷ್ಕೃತ್ಯ ಎಸಗಿದ ಪುಂಡರನ್ನು ಆದಷ್ಟು ಬೇಗನೆ ಬಂಧಿಸಬೇಕು ಹಾಗೂ ಏಕೀಕರಣ ಸಮಿತಿಯ ವಜಾಗೊಳಿಸಬೇಕು, ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು.

Edited By : Manjunath H D
Kshetra Samachara

Kshetra Samachara

19/12/2021 04:16 pm

Cinque Terre

22.31 K

Cinque Terre

0

ಸಂಬಂಧಿತ ಸುದ್ದಿ