ಕುಂದಗೋಳ : ತಾಲೂಕು ಸೇರಿದಂತೆ ರಾಜ್ಯಾದ್ಯಂತ ಕಳೆದ ಮೂರ್ನಾಲ್ಕು ವರ್ಷಗಳಿಂದ ಅತಿವೃಷ್ಟಿ ಉಂಟಾಗಿದ್ದರೂ ಸರ್ಕಾರ ಸೂಕ್ತ ಪರಿಹಾರ ಹಾಗೂ ಬೆಳೆವಿಮೆ ಹಣ ನೀಡಲು ವಿಳಂಬ ಮಾಡುತ್ತಿದೆ ಈ ಕ್ರಮ ಸರಿಯಲ್ಲ ಎಂದು ಯರೇಬೂದಿಹಾಳ ಗ್ರಾಮಸ್ಥರು ತಹಶೀಲ್ದಾರ ಕಚೇರಿ ಎದುರು ಧರಣಿ ನಡೆಸಿದರು.
ಬೆಳೆ ವಿಮೆ ಹಾಗೂ ಅತಿವೃಷ್ಟಿ ಪರಿಹಾರ ನೀಡಬೇಕು ಕೃಷಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ರೈತರ ಹೊಲಗಳ ಆನೆವಾರಿ ನಡೆಸಿ ಪರಿಹಾರ ನೀಡದಿದ್ದಲ್ಲಿ ಇದೇ ಸೋಮವಾರ ಡಿಸೆಂಬರ್ 20 ರಿಂದ ಕುಂದಗೋಳ ತಹಶೀಲ್ದಾರ ಕಚೇರಿ ಎದುರು ನಿರಂತರ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇವೆ ಎಂದು ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಹಾಗೂ ಸಹಾಯಕ ಕೃಷಿ ನಿರ್ದೇಶಕ ಸದಾಶಿವ ಕಾನೂರಿ ಅವರಿಗೆ ಯರೇಬೂದಿಹಾಳ ಗ್ರಾಮಸ್ಥರು ಮನವಿ ಸಲ್ಲಿಸಿದರು.
Kshetra Samachara
18/12/2021 10:55 pm