ಧಾರವಾಡ: ಎಂಇಎಸ್ ಸಂಘಟನೆಯವರು ಕರ್ನಾಟಕದಲ್ಲೇ ಇದ್ದು, ಕರ್ನಾಟಕದ ನೀರು ಕುಡಿಯುತ್ತಾರೆ. ಇಲ್ಲಿನ ನೀರು ಕುಡಿದು ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನಗೊಳಿಸುವುದಾದರೆ ಆ ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂದು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲೂ ಶಿವಾಜಿ ಮೂರ್ತಿಗಳಿವೆ. ಅವುಗಳನ್ನು ನಾವೂ ಭಗ್ನಗೊಳಿಸಿದರೆ ನಾವು ದೇಶದ್ರೋಹಿಗಳು ಎನಿಸಿಕೊಳ್ಳುತ್ತೇವೆ. ಈ ಮೂರ್ತಿ ಭಗ್ನಗೊಳಿಸುವುದು ಸರಿಯಲ್ಲ ಎಂದರು.
ಮಹಾಜನ್ ವರದಿ ಪ್ರಕಾರ ಬೆಳಗಾವಿ ಕರ್ನಾಟಕಕ್ಕೇ ಸೇರಿದೆ ಎಂದು ಹೇಳಲಾಗಿದೆ. ಅದರ ಬಗ್ಗೆ ಹೆಚ್ಚು ಮಾತನಾಡುವ ಅಗತ್ಯವಿಲ್ಲ. ರಾಯಣ್ಣನ ಮೂರ್ತಿ ಭಗ್ನಗೊಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
Kshetra Samachara
18/12/2021 05:11 pm