ಹುಬ್ಬಳ್ಳಿ : ಸದನದಲ್ಲಿ ರಮೇಶ್ ಕುಮಾರ ರಂತ ಹಿರಿಯರು ಮಹಿಳೆಯರ ಬಗ್ಗೆ ಅವಹೇಳನ ಮಾಡಬಾರದಾಗಿತ್ತು, ಅವರು ಯಾಕೆ ಆ ರೀತಿ ಹೇಳಿದರು ಅಂತ ಅರ್ಥ ಆಗಲಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶಟ್ಟರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿ ಶಬ್ದ ಪ್ರಯೋಗ ಅಥವಾ ಮಹಿಳೆಯರ ಬಗ್ಗೆ ಮಾತನಾಡೋದು ಸರಿ ಅಲ್ಲ, ನಿನ್ನೆಯೇ ಆ ಬಗ್ಗೆ ಕ್ಷಮೆ ಕೇಳಬೇಕಿತ್ತು, ಇವತ್ತು ಕೇಳಿದ್ದಾರೆ ಎಂದರು. ಅವರೊಬ್ಬ ಒಳ್ಳೆ ರೀತಿಯ ಸಂಸದಿಯ ಪಟು, ಆದರೆ ನಡುವಳಿಕೆ ಇದಲ್ಲ ಎಂದ ಅವರು, ಅವರು ಒಬ್ಬ ಸ್ಪೀಕರ್ ಆಗಿ ಕೆಲಸ ಮಾಡಿದವರು, ಮಾತನಾಡುವಾಗ ಬಹಳಷ್ಟು ಚಿಂತಿಸಿ ಮತನಾಡಬೇಕಿತ್ತು ಎಂದರು.
ಸದನದಲ್ಲಿ ಸರಿಯಾದ ಚರ್ಚೆ ನಡೆಯದೇ ಇರುವ ವಿಚಾರವಾಗಿ ಮಾತನಾಡಿದ ಅವರು, ಸದನದಲ್ಲಿ ನಾವು ಸರ್ಕಾರ ನಡೆಸೋಕೆ ಉತ್ತರ ಕೊಡೋಕೆ ಸಿದ್ಧವಾಗಿರ್ತೀವಿ, ಸ್ಪಷ್ಟವಾಗಿ ಅವರು ಯಾವುದನ್ನ ಮಂಡಿಸಬೇಕು ಅನ್ನೋದನ್ನ ಅವರು ಅರ್ಥ ಮಾಡಿಕೊಳ್ಳಬೇಕು ಎಂದ ಶಟ್ಟರ್, ಸದನದಲ್ಲಿ ಧರಣಿ ಮಾಡುವುದು, ಬಾಯ್ಕಾಟ್ ಮಾಡೋದು, ಬೀದಿಲಿ ಪ್ರತಿಭಟನೆ ಮಾಡೋದೆಲ್ಲ ರಾಜಕೀಯ ಗಿಮಿಕ್, ಈ ಭಾಗದ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದರೆ ಸರ್ಕಾರಕ್ಕೆ ಸಲಹೆ ನೀಡಿ, ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಆದ್ರೆ ಅದಕ್ಕೆ ಯಾವುದೇ ಆದಾರ ಇಲ್ಲ, ಸರಿಯಾಗಿ ಸದನ ನಡೆಯದೆ ಇರೋದಕ್ಕೆ ಕಾಂಗ್ರೆಸ್ಸಿಗರ ಅಸಹಕಾರ ಕಾರಣ ಎಂದರು.
ಮತಾಂತರ ಕಾಯ್ದೆ ವಿಚಾರವಾಗಿ ಮಾತನಾಡಿದ ಅವರು, ಸ್ವಯಂಪ್ರೇರಿತ ಮತಾಂತರಕ್ಕೆ ಯಾವುದೇ ನಿರ್ಬಂಧ ಇಲ್ಲ, ಆದರೆ ಬಲವಂತವಾಗಿ ಇವತ್ತು ಮತಾಂತರ ನಡೆಯುತ್ತಿದೆ, ಆಸೆ, ಆಮಿಷ ಒಡ್ಡಿ ಮತಾಂತರ ಮಾಡುವುದಕ್ಕೆ ನಮ್ಮ ತಡೆ ಇದೆ ಎಂದರು.ಇನ್ನು ಯಾವುದೇ ಸಮುದಾಯ ಇರಲಿ ಮತಾಂತರ ನಿಷೇಧ ಕಾಯ್ದೆ ಕಾಂಗ್ರೆಸ್ ಗೆ ಯಾಕೆ ಅನ್ವಯವಾಗುತ್ತೆ ಎಂದ ಅವರು, ಬಿಲ್ ನಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಮಾತ್ರ ಅಂತ ಇರೋದಿಲ್ಲ, ನೀವು ತಪ್ಪು ಮಾಡದಿದ್ದರೆ ಹೆದರುವ ಪ್ರಶ್ನೆ ಇಲ್ಲ ಎಂದರು.
ಇನ್ನು ಮಹಾದಾಯಿ ವಿಚಾರದಲ್ಲಿ ಕೆಲ ಕಾನೂನು ತೊಡಕಿದೆ, ಕೋರ್ಟ್ ನಲ್ಲಿ ಕೇಸ್ ಪೆಂಡಿಂಗ್ ಇದೆ, ಸರ್ಕಾರದ ಹಂತದಲ್ಲಿ ಬಗೆಹರೆಸಬೇಕಾಗುತ್ತೆ ಎಂದ ಅವರು, ನ್ಯಾಯಾಲಯದಲ್ಲಿ ನಮಗೆ ಮಹದಾಯಿ ನೀರಿನ ಬಗ್ಗೆ ಹಕ್ಕಿದೆ ಅನ್ನೋ ತೀರ್ಪು ಬಂದಿದೆ, ನಮಗೆ ಬರಬೇಕಾದ ನೀರು ನಮಗೆ ಬರೋದು ನಿಶ್ಚಿತ ಎಂದರು.
Kshetra Samachara
17/12/2021 05:22 pm