ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸ್ಟ್ರಾಂಗ್ ರೂಮ್‌ಗಳು ಓಪನ್ :ಮತ ಎಣಿಕೆ ಆರಂಭ

ಧಾರವಾಡ: ಧಾರವಾಡ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣಾ ಮತ ಎಣಿಕೆ ಆರಂಭಗೊಂಡಿದೆ.

ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳನ್ನೊಳಗೊಂಡು ಈ ಚುನಾವಣೆ ನಡೆದಿದ್ದು, ಮೂರು ಜಿಲ್ಲೆಗಳಿಂದ ಬಂದ ಮತ ಪೆಟ್ಟಿಗೆಗಳನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸ್ಟ್ರಾಂಗ್‌ ರೂಮ್‌ಗಳಲ್ಲಿ ಭದ್ರವಾಗಿ ಇಡಲಾಗಿತ್ತು.

ಇಂದು ಬೆಳಿಗ್ಗೆ 7-30 ರ ಸುಮಾರಿಗೆ ಚುನಾವಣಾಧಿಕಾರಿಯೂ ಆದ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್‌ಗಳನ್ನು ತೆರೆದು ಮತ ಎಣಿಕೆಗೆ ಚಾಲನೆ ನೀಡಿದ್ದಾರೆ.

Edited By : Manjunath H D
Kshetra Samachara

Kshetra Samachara

14/12/2021 08:41 am

Cinque Terre

45.9 K

Cinque Terre

1

ಸಂಬಂಧಿತ ಸುದ್ದಿ