ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಾಳೆ ಅಧಿಕೃತವಾಗಿ‌ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷ ಸೇರಲಿರುವ ಎನ್.ಎಚ್.ಕೋನರೆಡ್ಡಿ...!

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೊಮ್ಮೆ ಜೆಡಿಎಸ್ ನಾಯಕ ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ಸಿದ್ದವಾಗಿದೆ. ಈ ಮೂಲಕ ಜೆಡಿಎಸ್ ನ‌ ಮತ್ತೊಂದು ವಿಕೆಟ್ ಪತನವಾದಂತಾಗಿದೆ.

ಹೌದು...ನವಲಗುಂದ ಕ್ಷೇತ್ರದ ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ನಾಳೆ ತೆನೆ ಇಳಿಸಿ, ಕೈ ಹಿಡಿಯಲಿದ್ದಾರೆ. ಕಳೆದ ಕೆಲ ದಿನಗಳಿಂದ ಕೋನರೆಡ್ಡಿ ಕಾಂಗ್ರೆಸ್ ಸೇರ್ಪಡೆ ಸುದ್ದಿ ಹರಿದಾಡುತ್ತಿತ್ತು. ಆದರೆ ನಾಳೆ ಅದಕ್ಕೆ ಮೂಹೂರ್ತ ಫಿಕ್ಸ್ ಆಗಿದೆ.

ಬೆಳಗಾವಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೋನರೆಡ್ಡಿ ಅಧಿಕೃತವಾಗಿ ಸೇರಲಿದ್ದು, ಈ ಭಾಗದಲ್ಲಿ ಬಸವರಾಜ ಹೊರಟ್ಟಿಯವರನ್ನು ಬಿಟ್ಟರೆ ಯಾವೊಬ್ಬ ನಾಯಕನು ಇಲ್ಲದಂತ ಸ್ಥಿತಿ ಜೆಡಿಎಸ್ ಗೆ ಒದಗಿ ಬಂದಿದೆ.

Edited By : Nagesh Gaonkar
Kshetra Samachara

Kshetra Samachara

13/12/2021 06:19 pm

Cinque Terre

29.18 K

Cinque Terre

3

ಸಂಬಂಧಿತ ಸುದ್ದಿ