ಹುಬ್ಬಳ್ಳಿ: ಪಿಟಿಸಿಎಲ್ ಕಾಯ್ದೆಯ ಸಮಗ್ರ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಆಗ್ರಹಿಸಿ ಇದೇ ಡಿಸೆಂಬರ್ 17 ರಂದು ಬೆಳಗಾವಿ ಸುವರ್ಣ ಸೌಧ ಚಲೋ ಹಮ್ಮಿಕೊಂಡಿದ್ದು, ಅಂದು ರಾಜ್ಯಮಟ್ಟದ ಧರಣಿ ಸತ್ಯಾಗ್ರಹ ನಡೆಸಲಿದ್ದೇವೆ ಎಂದು, ಸಮತಾ ಸೈನಿಕ ದಳದ ಸಂಚಾಲಕ ಶಂಕರ ಅಜಮನಿ ಹೇಳಿದರು.
ಎಸ್ಸಿ, ಎಸ್.ಟಿ ಭೂ ಪರಭಾರೆ ನಿಷೇಧ ಕಾಯ್ದೆ ಸಮಗ್ರ ತಿದ್ದುಪಡಿ ಮಸೂದೆಯನ್ನು ವಿಧಾನಮಂಡಲದಲ್ಲಿ ಅಂಗೀಕಾರ ಮಾಡಬೇಕೆಂದು, 2017 ರಿಂದ ದಲಿತ ಸಂಘಟನೆಗಳ ಒಕ್ಕೂಟವು ಹಂತ ಹಂತದ ಹೋರಾಟಗಳನ್ನು ನಡೆಸುತ್ತಾ ಬಂದಿದ್ದು, ಸದ್ಯ ಒಕ್ಕೂಟವೇ ಸಿದ್ದಪಡಿಸಿದ ಮಸೂದೆಯ ಕರಡನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು, ತಾತ್ವಿಕ ಒಪ್ಪಿಗೆ ನೀಡಿ ಸಂಬಂಧಿಸಿದ ಇಲಾಖೆಗಳ ವರಿಷ್ಠಾಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಗಿದೆ, ಆದ್ದರಿಂದ ಸಚಿವ ಸಂಪುಟವು ಈ ಕರಡನ್ನು ಅನುಮೋದಿಸಬೇಕು ಹಾಗೂ ಸುವರ್ಣ ಸೌಧ ವಿಧಾನ ಮಂಡಲದಲ್ಲಿ ಅಂಗೀಕರಿಸಬೇಕೆಂದು ತಿಳಿಸಿದರು.
Kshetra Samachara
11/12/2021 12:46 pm