ಧಾರವಾಡ:ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜನ್ಮದಿನದ ಅಂಗವಾಗಿ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ದೇಸಾಯಿ ಅವರು, ಧಾರವಾಡದಲ್ಲಿ 100ಕ್ಕೂ ಹೆಚ್ಚು ನಿರ್ಗತಿಕ ಮಹಿಳೆಯರಿಗೆ ಸೀರೆ, ಸ್ಯಾನಿಟರಿ ಪ್ಯಾಡ್‌ಗಳು, ವೈದ್ಯಕೀಯ ಕಿಟ್‌ಗಳು ಮತ್ತು ದಿನಬಳಕೆಯ ವಸ್ತುಗಳನ್ನು ವಿತರಿಸಿ ಅರ್ಥಪೂರ್ಣವಾಗಿ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಬ್ಲಾಕ್ ಜಿ.ಎಸ್ ವಾಸಿಂ ಕಿತ್ತೂರ, ಕೃಷ್ಣ ಗುಮ್ಮಗೋಳ, ನಿಸಾರ್, ಪ್ರಕಾಶ ದೊಡವಾಡ, ಅಲ್ತಾಫ್ ಸೌದಾಗರ, ಇಸಾಕ್ ತಾಂಬೋಳಿ, ವಿಶಾಲ ಕಮಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
11/12/2021 10:33 am