ಧಾರವಾಡ: ಧಾರವಾಡದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಮತದಾನ ನಡೆಯುತ್ತಿದ್ದು, ಮಧ್ಯಾಹ್ನದ ಹೊತ್ತಿಗೆ ಮತದಾನ ಚುರುಕು ಪಡೆದುಕೊಂಡಿದೆ.
ಧಾರವಾಡ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ತೆರೆಯಲಾಗಿರುವ ಮತಗಟ್ಟೆಗಳಿಗೆ ಗ್ರಾಮ ಪಂಚಾಯ್ತಿ ಸದಸ್ಯರು ಬಂದು ಮತದಾನ ಮಾಡುತ್ತಿದ್ದಾರೆ. ಬೆಳಿಗ್ಗೆ ನಿಧಾನಗತಿಯಲ್ಲಿ ನಡೆದಿದ್ದ ಮತದಾನ ಮಧ್ಯಾಹ್ನದ ನಂತರ ಚುರುಕು ಪಡೆದುಕೊಂಡಿದೆ.
ಮಧ್ಯಾಹ್ನದ ನಂತರ ಧಾರವಾಡ ಜಿಲ್ಲೆಯಲ್ಲಿ ಶೇ.29.49 ರಷ್ಟು, ಹಾವೇರಿ ಜಿಲ್ಲೆಯಲ್ಲಿ ಶೇ.51.56 ರಷ್ಟು ಹಾಗೂ ಗದಗ ಜಿಲ್ಲೆಯಲ್ಲಿ ಶೇ. 53.09 ರಷ್ಟು ಸೇರಿದಂತೆ ಒಟ್ಟಾರೆಯಾಗಿ ಶೇ.45.59 ರಷ್ಟು ಮತದಾನವಾಗಿದೆ.
Kshetra Samachara
10/12/2021 02:15 pm