ಹುಬ್ಬಳ್ಳಿ : ಡಿಸೆಂಬರ್ 13 ರಂದು ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದ ಮಹಾನಗರ ಪಾಲಿಕೆ ಆವರಣದಲ್ಲಿನ ಮತಗಟ್ಟೆಯಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆಯಲಿರುವ ಸದನವನ್ನು ಸಂಪೂರ್ಣಗೊಳಿಸಬೇಕು. ಚರ್ಚೆಗೆ ಬರುವ ವಿಷಯಗಳ ಬಗ್ಗೆ ಸುದೀರ್ಘ ಅವಲೋಕನ ಮಾಡುವ ಗುರಿ ಇದೆ. ವಿಷಯಾಧಾರಿಯ ಚರ್ಚೆ ಮಾಡಬೇಕು ಎಂದು ಮನವಿ ಮಾಡಿದ್ದೇವೆ. ಅಧಿವೇಶನದ 5 ದಿನದ ಮುಂಚಿತವಾಗಿಯೇ ವಿಧೇಯಕಗಳ ಮಾಹಿತಿ ಅಧಿಕೃತವಾಗಿ ಬರಬೇಕು. ಆದರೆ ನಿನ್ನೆಯವರೆಗೂ ಯಾವುದೇ ಒಂದೇ ವಿಧೇಯಕ ಬಂದಿಲ್ಲ. ಹಾಗಾಗಿ ಮುಖ್ಯಮಂತ್ರಿ, ವಿಪಕ್ಷ ನಾಯಕರಿಗೆ ಈ ಬಗ್ಗೆ ಪತ್ರ ಬರೆದಿದ್ದೇನೆ ಎಂದರು.
ಇನ್ನೂ ವಿಧಾನ ಪರಿಷತ್ ಚುನಾವಣೆಯಲ್ಲಿ ಐದು ಜನರಿಗೆ ಪ್ರಾಶಸ್ತ್ಯದ ಮತ ಹಾಕಬಹುದು. ನನ್ನ ವಿವೇಚನೆಗೆ ತಕ್ಕಂತೆ ಮತ ಹಾಕಿದ್ದೇನೆ ಎಂದರು.
Kshetra Samachara
10/12/2021 11:45 am