ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ ತಾಲೂಕಿನಲ್ಲಿ 353 ಗ್ರಾ.ಪಂ ಸದಸ್ಯರ ಮತ ಯಾರಿಗೆ ಹಿತ ?

ಕುಂದಗೋಳ: ಬಹು ಕುತೂಹಲ ಕೆರಳಿಸಿರುವ ಹಾವೇರಿ ಗದಗ ಧಾರವಾಡ ಸಂಪೂರ್ಣ ಗ್ರಾಮ ಪಂಚಾಯಿತಿ ಸ್ಥಳೀಯ ಚುನಾವಣೆಯಲ್ಲಿ ಕುಂದಗೋಳ ತಾಲೂಕಿನ 26 ಗ್ರಾಮ ಪಂಚಾಯಿತಿಗಳಲ್ಲಿ 24 ಗ್ರಾಮ ಪಂಚಾಯಿತಿಯ 353 ಗ್ರಾ.ಪಂ ಸದಸ್ಯರು ಮತದಾನದ ಅರ್ಹತೆ ಹೊಂದಿದ್ದಾರೆ.

ಇನ್ನೂ ಒಟ್ಟು 26 ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಸದಸ್ಯತ್ವದ ಅವಧಿ ಮುಗಿದ ಮಳಲಿ ಗ್ರಾಪಂ 11 ಸದಸ್ಯತ್ವ ಹಾಗೂ ಪಶುಪತಿಹಾಳದ 9 ಸದಸ್ಯತ್ವ ಮತದಾನದಿಂದ ಹಿಂದುಳಿದರೇ, ಗೌಡಗೇರಿ ಗ್ರಾಪಂ 1 ಸ್ಥಾನ ಯಲಿವಾಳ ಗ್ರಾಪಂ 1 ಸ್ಥಾನ ಅನಿವಾರ್ಯ ಕಾರಣದಿಂದ ತೆರವಾಗಿವೆ.

ಇನ್ನೂ ಈ ಹಿಂದೆ ಗ್ರಾಪಂ ಚುನಾವಣೆ ಬಹಿಷ್ಕರಿಸಿದ ಬರದ್ವಾಡ ಗ್ರಾಪಂ 5 ಸ್ಥಾನಗಳು ವಿಧಾನ ಪರಿಷತ್ ಚುನಾವಣೆಗೆ ಅಲಭ್ಯವಾಗಿದ್ದು, ಒಟ್ಟಾರೆ ಕುಂದಗೋಳ ತಾಲೂಕಿನ ವ್ಯಾಪ್ತಿಯಲ್ಲಿ 29 ಗ್ರಾಮ ಪಂಚಾಯಿತಿ ಸ್ಥಾನಗಳು ಚುನಾವಣೆಗೆ ಅಲಭ್ಯವಾಗಿ ಒಟ್ಟು 364 ಗ್ರಾಪಂ ಸದಸ್ಯರ ಮತಗಳ ಪೈಕಿ 353 ಜನ ಮಾತ್ರ ನಾಳೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಮತದಾನ ಅರ್ಹತೆ ಹೊಂದಿದ್ದಾರೆ.

ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ, ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಸರ್ವರೂ ಯಶಸ್ವಿಯಾಗಿ ಪ್ರಚಾರ ಸಮಾವೇಶದ ಜೊತೆ ಗ್ರಾಪಂ ಸದಸ್ಯರಿಗೆ ನಾನಾ ಸೌಕರ್ಯ ಸೇರಿದಂತೆ ಗ್ರಾಮಗಳ ಅಭಿವೃದ್ಧಿ ಘೋಷಣೆಗಳು ಎಷ್ಟರ ಮಟ್ಟಿಗೆ ನಾಳೆ ಮತ ಪೆಟ್ಟಿಗೆಗೆ ಮತ ಹಾಕುವ ಮೂಲಕ ಉತ್ತರ ಕೊಡಲಿವೆ ಎನ್ನುವುದನ್ನು ಕಾದು ನೋಡಬೇಕಿದೆ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ

Edited By : Manjunath H D
Kshetra Samachara

Kshetra Samachara

09/12/2021 04:20 pm

Cinque Terre

19.64 K

Cinque Terre

0

ಸಂಬಂಧಿತ ಸುದ್ದಿ