ಹುಬ್ಬಳ್ಳಿ: ಅವರೆಲ್ಲ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸ್ವಚ್ಚತೆಗೆ ಶ್ರಮಿಸುವ ಶ್ರಮ ಜೀವಿಗಳು. ಈಗ ಆ ಶ್ರಮ ಜೀವಿಗಳಲ್ಲಿ ಆತಂಕ ಉಂಟಾಗಿದೆ. ಏಕಾಏಕಿ ವರ್ಗಾವಣೆ ಮಾಡಲು ನಿರ್ಧಾರ ಮಾಡಿರುವುದು ಪೌರಕಾರ್ಮಿಕರಿಗೆ ಸಂಕಷ್ಟ ಬಂದೊದಗಿದೆ.
ಹೌದು..ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೇರವೇತನ ಹಾಗೂ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುವ ಸುಮಾರು 2500 ಪೌರಕಾರ್ಮಿರು ಇದ್ದಾರೆ. ಇವರಿಗೆ ವೇತನ, ಸೇವಾ ಭದ್ರತೆ ನೀಡದೇ ಅವೈಜ್ಞಾನಿಕ ರೀತಿಯಲ್ಲಿ ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಪೌರಕಾರ್ಮಿಕರು ಪ್ರತಿಭಟನೆ ಹಾದಿಯನ್ನು ಹಿಡಿದಿದ್ದಾರೆ.
ಅಲ್ಲದೇ ಪೌರಕಾರ್ಮಿಕರನ್ನು ಮರು ನಿಯೋಜನೆ ಮಾಡುವ ಕುರಿತು ಮಹಾನಗರ ಪಾಲಿಕೆ ಅವೈಜ್ಞಾನಿಕ ನೀತಿಯನ್ನು ಅನುಸರಿಸುತ್ತಿದೆ. ಈ ನೀತಿಯನ್ನು ಹಿಂಪಡೆಯಬೇಕು ಅಲ್ಲದೇ ಪೌರಕಾರ್ಮಿಕರ ಹಕ್ಕೊತ್ತಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪೌರಕಾರ್ಮಿಕರು ಪಟ್ಟು ಹಿಡಿದಿದ್ದಾರೆ.
ಒಟ್ಟಿನಲ್ಲಿ ಅವಳಿನಗರದ ಸ್ವಚ್ಚತೆಗೆ ಶ್ರಮವಹಿಸುವ ಪೌರಕಾರ್ಮಿಕರ ಸಮಸ್ಯೆಗಳನ್ನು ಮಹಾನಗರ ಪಾಲಿಕೆ ಸೂಕ್ತವಾಗಿ ಆಲಿಸುವ ಮೂಲಕ ಕಷ್ಟಗಳಿಗೆ ಸ್ಪಂದಿಸುವ ಕಾರ್ಯವನ್ನು ಮಾಡಬೇಕಿದೆ.
Kshetra Samachara
04/12/2021 06:32 pm