ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕವಿವ ಸಂಘದ ಪ್ರಧಾನ ಕಾರ್ಯದರ್ಶಿಯಾದ ಶಂಕರ ಹಲಗತ್ತಿ

ಧಾರವಾಡ: ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಶಂಕರ ಹಲಗತ್ತಿ ಗೆಲುವು ಸಾಧಿಸಿದ್ದಾರೆ.

ಪ್ರಕಾಶ ಉಡಿಕೇರಿ, ಶಂಕರ ಹಲಗತ್ತಿ ಹಾಗೂ ಮಹಾದೇವ ದೊಡಮನಿ ಅವರ ಬಣಗಳ ನಡುವೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ತೀವ್ರ ಪೈಪೋಟಿ ನಡೆದಿತ್ತು. ಶಂಕರ ಹಲಗತ್ತಿ ಬಣ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಜಯಭೇರಿ ಬಾರಿಸಿದೆ. ಆ ಮೂಲಕ ಹಲಗತ್ತಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ಈ ಹಿಂದೆಯೂ ಡಾ.ಪಾಟೀಲ ಪುಟ್ಟಪ್ಪನವರ ಅವಧಿಯಲ್ಲಿ ಶಂಕರ ಹಲಗತ್ತಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಸಮಾನ ಮನಸ್ಕರ ವೇದಿಕೆ ವತಿಯಿಂದ ಶಂಕರ ಹಲಗತ್ತಿ ಬಣ ಸ್ಪರ್ಧೆ ಮಾಡಿತ್ತು. ಚುನಾವಣೆಯಲ್ಲಿ ಗೆಲವು ಸಾಧಿಸಿದ್ದು, ಇದು ಪಾಟೀಲ ಪುಟ್ಟಪ್ಪನವರಿಗೆ ಸಂದ ಜಯ ಎಂದು ಶಂಕರ ಹಲಗತ್ತಿ ಬಣದವರು ಸಂಘದ ಮುಂದೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

Edited By : Nagesh Gaonkar
Kshetra Samachara

Kshetra Samachara

29/11/2021 05:41 pm

Cinque Terre

34.13 K

Cinque Terre

3

ಸಂಬಂಧಿತ ಸುದ್ದಿ