ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದ ಕವಿವ ಸಂಘದ ಚುನಾವಣೆ: ಬಿರುಸಿನ ಮತದಾನ

ಧಾರವಾಡ: ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಧಾರವಾಡದ ಪ್ರತಿಷ್ಟಿತ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯಕಾರಿ ಮಂಡಳಿಗೆ ಭಾನುವಾರ ಮತದಾನ ನಡೆಯಿತು.

ವಿದ್ಯಾವರ್ಧಕ ಸಂಘದಲ್ಲೇ ಮೂರು ಬೂತ್‌ಗಳನ್ನು ಮಾಡಲಾಗಿತ್ತು. ಸಂಘದ ಸದಸ್ಯತ್ವ ಪಡೆದವರು ಸರತಿ ಸಾಲಿನಲ್ಲಿ ಬಂದು ಬೆಳಿಗ್ಗೆಯಿಂದಲೇ ಮತದಾನ ಮಾಡಿದರು.

ಸಮಾನ ಮನಸ್ಕರ ವೇದಿಕೆ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಬಣ ಸೇರಿದಂತೆ ಮೂರ್ನಾಲ್ಕು ಬಣಗಳು ಸಂಘದ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿವೆ. ಬೆಳಿಗ್ಗೆ 8 ಗಂಟೆಯಿಂದಲೇ ಮತದಾನ ನಡೆಯುತ್ತಿದ್ದು, ಹುರುಪಿನಿಂದಲೇ ಮತದಾನ ನಡೆಯುತ್ತಿದೆ. ನಾಳೆಗೆ ಮತ ಎಣಿಕಾ ಪ್ರಕ್ರಿಯೆ ನಡೆಯಲಿದ್ದು, ಕರ್ನಾಟಕ ವಿದ್ಯಾವರ್ಧಕ ಸಂಘದ ಗದ್ದುಗೆಯನ್ನು ಯಾರು ಏರುತ್ತಾರೆ ಎಂಬುದು ಗೊತ್ತಾಗಲಿದೆ.

Edited By : Manjunath H D
Kshetra Samachara

Kshetra Samachara

28/11/2021 04:00 pm

Cinque Terre

33.27 K

Cinque Terre

0

ಸಂಬಂಧಿತ ಸುದ್ದಿ