ಹುಬ್ಬಳ್ಳಿ: ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ ರಂಗೇರತಾ ಇದೆ. ಈ ಮಧ್ಯೆ ವಿಧಾನಸಭೆ ಚುನಾವಣೆಗೂ ಈಗಿನಿಂದಲೇ ಫೈಟ್ ಶುರುವಾಗಿದೆ. ವಿಪಕ್ಷ ನಾಯಕ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಶಿಷ್ಯರಿಬ್ಬರೂ ಈಗಿನಿಂದಲೇ ಆ ಕ್ಷೇತ್ರದ ಮೇಲೆ ಕಣ್ಣಿಟ್ಟು, ಕಿತ್ತಾಟ ಶುರು ಮಾಡಿದ್ದಾರೆ.
ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಕಾಲ ಸಮಯವಿದೆ. ಆದರೆ ವಿಧಾನಸಭೆ ಚುನಾವಣೆಗೆ ಆ ಹೈವೋಲ್ಟೇಜ್ ಕ್ಷೇತ್ರದಿಂದ ಸ್ಪರ್ಧಿಸಲು ಕೈ ನಾಯಕರಿಬ್ಬರು ಈಗಿನಿಂದಲೇ ಬಿಗ್ ಫೈಟ್ ಶುರುವಿಟ್ಟು ಕೊಂಡಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದರಾಮಯ್ಯ ಶಿಷ್ಯ ಹಾಗೂ ಡಿಕೆಶಿ ಶಿಷ್ಯನ ಮಧ್ಯೆ ಟಿಕೆಟ್ ಗಾಗಿ ಫೈಪೋಟಿ ಶುರುವಾಗಿದೆ. ಕಲಘಟಗಿ ಕ್ಷೇತ್ರದಿಂದ ಮೂರು ಭಾರಿ ಸ್ಪರ್ಧಿಸಿ ಸಚಿವರಾಗಿದ್ದ ಮಾಜಿ ಸಚಿವ ಸಂತೋಷ ಲಾಡ್ ಇನ್ನೊಮ್ಮೆ ಕಲಘಟಗಿ ಕ್ಷೇತ್ರದಿಂದಲೇ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಆದರೆ ಡಿ.ಕೆ.ಶಿವಕುಮಾರ ಕಟ್ಟಾ ಶಿಷ್ಯನೆಂದೇ ಬಿಂಬಿತರಾಗಿರುವ ಮಾಜಿ ಎಂಎಲ್ ಸಿ ನಾಗರಾಜ ಛಬ್ಬಿ ಸಹ ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಪೈಪೋಟಿ ನಡೆಸುತ್ತಿರುವುದು ಲಾಡ್ ಗೆ ಇರುಸು ಮುರುಸು ತಂದಿಟ್ಟಿದೆ.
ಸಂತೋಷ ಲಾಡ್ ಕಲಘಟಗಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಒಮ್ಮೆ ಸಚಿವರಾಗಿದ್ದರು ಕ್ಷೇತ್ರದಿಂದ ದೂರವುಳಿದಿದ್ದಾರೆ ಎನ್ನುವುದು ಛಬ್ಬಿ ವಾದ. ಅಲ್ಲದೇ ಸಂತೋಷ ಲಾಡ್ ಕಲಘಟಗಿಯಿಂದ ಮೊದಲ ಭಾರಿ ಸ್ಪರ್ಧೆ ಮಾಡುವ ವೇಳೆ ತಾವೂ ಕ್ಷೇತ್ರ ಬಿಟ್ಟುಕೊಟ್ಟಿದ್ದು, ಇದೀಗ ಮರಳಿ ಆ ಕ್ಷೇತ್ರವನ್ನು ತಮ್ಮಗೆ ಬಿಟ್ಟು ಕೊಡಬೇಕು ಅಂತಿದ್ದಾರೆ ಮಾಜಿ ಎಂಎಲ್ ಸಿ ನಾಗರಾಜ ಛಬ್ಬಿ.
Kshetra Samachara
27/11/2021 07:34 pm