ಹುಬ್ಬಳ್ಳಿ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯಡಿ ಐಸಿಐಸಿಐ ಲಂಬಾರ್ಡ್ ಜನರಲ್ ಇನ್ಶುರೆನ್ಸ್ ಕಂಪನಿ ರೈತರಿಂದ ಕೋಟ್ಯಾಂತರ ರೂಪಾಯಿ ತುಂಬಿಸಿಕೊಂಡು ವಂಚಿಸಿದೆ ಎಂದು ಆರೋಪಿಸಿ ನವಲಗುಂದ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎನ್.ಹೆಚ್.ಕೊನರೆಡ್ಡಿ ಗೋಕುಲರಸ್ತೆ ಪೋಲಿಸ ಠಾಣೆಯಲ್ಲಿ ದೂರು ದಾಖಲಿಸಿದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯಡಿ ವಿಮಾ ಕಂಪನಿಗಳು ಹಣವನ್ನು ಭರಣಾ ಮಾಡಿಕೊಂಡು, ರೈತರಿಗೆ ಅತಿವೃಷ್ಟಿ, ನೈಸರ್ಗಿಕ ವಿಕೋಪ, ಹವಾಮಾನ ವೈಪರೀತ್ಯದಿಂದ ಹಾನಿಯಾದರೆ, ಬೆಳೆ ಬಾರದೇ ಇದ್ದರೇ ರೈತರಿಗೆ ಪರಿಹಾರ ನೀಡಬೇಕು. ಆದರೆ ಭಾರತಿ ಎಕ್ಸಾ ಇನ್ಶುರೆನ್ಸ್, ಗೋಕುಲ ರಸ್ತೆಯಲ್ಲಿನ ಐಸಿಐಸಿಐ ಲಂಬಾರ್ಡ್ ಜನರಲ್ ಇನ್ಶುರೆನ್ಸ್ ಖಾಸಗಿ ಕಂಪನಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ರೈತರಿಗೆ ಸಹಾಯಧನ ಹಾಗೂ ರೈತರ ವಂತಿಗೆ ಸೇರಿ ಬೆಳೆವಿಮೆ ಪ್ರತಿವರ್ಷ ಬ್ಯಾಂಕುಗಳ ಮೂಲಕ ಕೋಟ್ಯಾಂತರ ರೂಪಾಯಿ ವಿಮಾ ಕಂಪನಿಗೆ ಭರಣಾ ಮಾಡಿಕೊಂಡು, ಸರ್ಕಾರದ ಆದೇಶದ ಪ್ರಕಾರ ನ.30 ರವರೆಗೆ ಬೆಳೆವಿಮೆ ತುಂಬಲು ಅವಕಾಶ ನೀಡಿದರು ಸಹಿತ ಕಂಪನಿಗಳು ಮಾತ್ರ ನ.20 ರವರೆಗೆ ಮಾತ್ರ ಪರಿಹಾರ ನೀಡುತ್ತೇವೆ ಎಂದು ಹೇಳುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಈವರೆಗೆ ಕೋಟ್ಯಂತರ ರೂಪಾಯಿ ಹಣವನ್ನು ರೈತರಿಂದ ತುಂಬಿಸಿಕೊಂಡು 2018-19 ರಿಂದ 2021 ರವರೆಗೆ ಕಾನೂನು ಪ್ರಕಾರ ಪರಿಹಾರ ನೀಡದೇ ವಂಚಿಸಿದ್ದಾರೆ.
ಇನ್ನು ಒಂದು ಗ್ರಾಮದಿಂದ 100 ರೈತರು ಅರ್ಜಿ ಸಲ್ಲಿಸಿದರು ಕೇವಲ 5 ರೈತರಿಗೆ ಪರಿಹಾರ ನೀಡುವ ಕೆಲಸ ಮಾಡುತ್ತಿದೆ. ಇದರಿಂದ ಉಳಿದ ರೈತರಿಗೆ ವಂಚನೆಯಾಗುತ್ತಿದೆ. ಈ ಬಗ್ಗೆ ಕಾನೂನು ಪ್ರಕಾರ ತನಿಖೆ ಮಾಡಿ ತಪ್ಪಿತಸ್ಥ ಕಂಪನಿಯಿಂದ ರೈತರಿಗೆ ಪರಿಹಾರ ಕೊಡಿಸಬೇಕೆಂದು ದೂರಿನ ಪ್ರತಿಯಲ್ಲಿ ತಿಳಿಸಿದ್ದಾರೆ.
Kshetra Samachara
27/11/2021 06:42 pm