ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬದಲಾದ ಮೇಯರ್,ಉಪಮೇಯರ್ ಮೀಸಲಾತಿ: ದಿನಕ್ಕೊಂದು ನಿರ್ಧಾರ ಏನಾಗಲಿದೆ ತೀರ್ಮಾನ ?

ಹುಬ್ಬಳ್ಳಿ:ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲು ಎರಡು ವರ್ಷ ಒಂಬತ್ತು ತಿಂಗಳು ಬೇಕಾಯಿತು. ಇನ್ನೂ ಚುನಾಯಿತ ಸದಸ್ಯರು ಅಧಿಕಾರ ಸ್ವೀಕರಿಸಲು ಎಷ್ಟು ವರ್ಷಗಳು ಬೇಕೋ ಎಂಬುವಂತ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಬಹುವಾಗಿ ಕೇಳಿ ಬರುತ್ತಿದೆ. ಹೀಗಿರುವಾಗಲೇ ರಾಜ್ಯ ಚುನಾವಣೆ ಆಯೋಗ ಒಂದಾದ ಮೇಲೊಂದರಂತೆ ಅಧಿಸೂಚನೆ ಹೊರಡಿಸುವ ಮೂಲಕ ಸದಸ್ಯರಲ್ಲಿ ಗೊಂದಲವನ್ನು ಸೃಷ್ಟಿ ಮಾಡುತ್ತಿದೆ.

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ನೂತನ ಸದಸ್ಯರ ಆಯ್ಕೆಯ ಫಲಿತಾಂಶ ಪ್ರಕಟಗೊಂಡು( ಸೆ.6) 81 ದಿನಗಳು ಕಳೆದರೂ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಇನ್ನೂ ನಡೆದಿಲ್ಲವಾಗಿದ್ದು ಹೊಸ ವರ್ಷಕ್ಕೆ ’ಗೌನ ಧರಿಸುವ’ ಭಾಗ್ಯ ನಿಕ್ಕಿ ಎನ್ನುವಂತಾಗಿದೆ. ಅಲ್ಲದೇ ಈ ಹಿಂದಿನ ಮೀಸಲಾತಿ ಬದಲಾಗಿದ್ದು ಸಾಮಾನ್ಯರಿಗೆ ಮೇಯರ್ ಹಾಗೂ ಸಾಮಾನ್ಯ ಮಹಿಳೆಗೆ ಉಪಮೇಯರ್ ಸ್ಥಾನ ಖಚಿತವಾಗಿದ್ದು ಈಗಾಗಲೇ ಮೂರು ಅವಧಿಯ ಮೀಸಲಾತಿ ಅಂತಿಮಗೊಂಡಿದ್ದು ಅಂತಿಮ ಕೊನೆಯ ಎರಡು ವರ್ಷಗಳದ್ದು ನಿರ್ಧಾರ ಆಗಬೇಕಿದೆ ಎನ್ನಲಾಗುತ್ತಿದೆ.

ಪಾಲಿಕೆಯ ನೂತನ ಸದಸ್ಯರ ಹೆಸರು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ನಂತರ ಈಗಾಗಲೇ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಂತಿಮಗೊಳಿಸಿರುವ ಹೊಸ ಮೀಸಲಾತಿ ಕಡತ ಮುಖ್ಯಮಂತ್ರಿಗಳ ಮುಂದಿದ್ದು ಇಷ್ಟರಲ್ಲೇ ಪ್ರಕಟಗೊಳ್ಳಲಿದೆ ಎಂದು ನಂಬಲರ್ಹ ಮೂಲಗಳು ಖಚಿತಪಡಿಸಿವೆ. ಈ ಹಿಂದಿನ ಲೆಕ್ಕಾಚಾರದಂತೆ ಮೇಯರ್ ಸ್ಥಾನ ಹಿಂದುಳಿದ ಎ ವರ್ಗಕ್ಕೆ ಹಾಗೂ ಉಪಮೇಯರ್ ಸ್ಥಾನ ಪರಿಶಿಷ್ಠ ಮಹಿಳೆಗೆ ಮೀಸಲಾಗಿತ್ತು.ಈಗ ಅದು ಬದಲಾಗಿದ್ದು ಸಾಮಾನ್ಯ ಮತ್ತು ಸಾಮಾನ್ಯ ಮಹಿಳೆ ಲೆಕ್ಕಾಚಾರದ ಅನ್ವಯವೇ ಚುನಾವಣೆ ನಿಶ್ಚಿತ ಎನ್ನಲಾಗಿದೆ.

Edited By :
Kshetra Samachara

Kshetra Samachara

26/11/2021 05:50 pm

Cinque Terre

35.78 K

Cinque Terre

7

ಸಂಬಂಧಿತ ಸುದ್ದಿ