ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ರಾ.ಹೆ ತಡೆದು ಪ್ರತಿಭಟನೆ ನಡೆಸಿದ ಎನ್ ಹೆಚ್ ಕೋನರಡ್ಡಿ

ನವಲಗುಂದ : ಕೃಷಿ ಇಲಾಖೆಯಲ್ಲಿ ರೈತರಿಂದ ಅರ್ಜಿ ಸ್ವೀಕರಿಸಿ ಸ್ವೀಕೃತಿ ನೀಡದೇ ಇರುವ ವಿಷಯ ಸೇರಿದಂತೆ ಇನ್ನು ಹಲವು ವಿಷಯಗಳ ವಿರುದ್ಧ ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ ಅವರು ಸೇರಿದಂತೆ ರೈತರು ಬುಧವಾರ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಲಯದ ಬಾಗಿಲು ಹಾಕಿ ಪ್ರತಿಭಟನೆ ನಡೆಸಿದರು.

ನವಲಗುಂದ ಕೃಷಿ ಇಲಾಖೆಯಲ್ಲಿ ಪ್ರಧಾನಮಂತ್ರಿ ಫಸಲಬೀಮಾ ಯೋಜನೆ ನವೆಂಬರ್ 30 ರ ವರೆಗೆ ಹಿಂಗಾರು ಪ್ರೀಮಿಯಂ ತುಂಬಲು ಅವಕಾಶವಿದ್ದು, ಮಳೆ ನಿಂತ ನಂತರ 3 ದಿನದಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಇನ್ನು ಅರ್ಜಿ ಸ್ವೀಕರಿಸುವ ಅವಧಿಯನ್ನು ಒಂದು ವಾರ ವಿಸ್ತರಿಸಬೇಕು. ಆದರೆ, ಕೃಷಿ ಇಲಾಖೆಯಲ್ಲಿ ರೈತರಿಂದ ಅರ್ಜಿ ಸ್ವೀಕರಿಸಿ, ಸ್ವೀಕೃತಿ ನೀಡದೇ ಇದ್ದಾಗ ರೈತರೆಲ್ಲರು ಸೇರಿ ಅಧಿಕಾರಿಗಳು ಬರುವ ವರೆಗೆ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಇನ್ನು ಮಾತನಾಡಿದ ಕೋನರಡ್ಡಿ ಅವರು, ರೈತರಿಗೆ ಬೆಳೆ 2018-19 ರಿಂದ 2020-21ರವರೆಗೆ ರೈತರಿಗೆ ಬೆಳೆವಿಮೆ ಹಾಗೂ ಬೆಳೆ ಪರಿಹಾರ ಸಿಗುವವರೆಗೆ ಜೆಡಿಎಸ್ ನಿಂದ ಹೋರಾಟ ಮಾಡಲಾಗುವದು ಎಂದರು.

Edited By : Shivu K
Kshetra Samachara

Kshetra Samachara

24/11/2021 09:20 pm

Cinque Terre

16.79 K

Cinque Terre

1

ಸಂಬಂಧಿತ ಸುದ್ದಿ