ಹುಬ್ಬಳ್ಳಿ: ಪರಿಷತ್ ಚುನಾವಣೆಗೆ ಟಿಕೆಟ್ ಯಾರಿಗೆ ಅಂತಾ ಕೈ ನಾಯಕರು ಸರಣಿ ಸಭೆ ನಡೆಸುತ್ತಾ ಇದ್ದರೆ. ಇತ್ತ ಧಾರವಾಡ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ಕ್ಷೇತ್ರಕ್ಕೆ ಕಾಂಗ್ರೆಸ್‌ನಲ್ಲಿ ಡಜನ್‌ಗೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಅಲ್ಪಸಂಖ್ಯಾತರಿಗೆ ಟಿಕೆಟ್ ಪಕ್ಕಾ ಆಗಿದ್ದು, ಕಮಲ ಪಾಳಯದಿಂದ ಪ್ರದೀಪ ಶೆಟ್ಟರ್ ಗೆ ಟಿಕೆಟ್ ಫಿಕ್ಸ್ ಅಂತಿದ್ದಾರೆ. ಆದರೆ ಹೈಕಮಾಂಡ್ ನಿಲುವು ಮಾತ್ರ ನಿಗೂಢವಾಗಿದೆ.
ಹೌದು...ಡಿಸೆಂಬರ್ 10 ರಂದು ಅವಿಭಾಜ್ಯ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ಗೆ ಚುನಾವಣೆ ನಡೆಯುತ್ತಿದೆ. ಹಾವೇರಿ, ಗದಗ, ಧಾರವಾಡ ಜಿಲ್ಲೆಯ ಚುನಾಯಿತ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಮತದಾನ ಮಾಡಲಿದ್ದಾರೆ. ಟಿಕೆಟ್‌ಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ತೀವ್ರ ಪೈಪೋಟಿ ನಡೆದಿದೆ. ಅವಿಭಾಜ್ಯ ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಶಿಗ್ಗಾಂವ ಮತ್ತು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯದಡಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುತ್ತಿದ್ದರು, ಗೆಲುವು ಮರೀಚಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಪರಿಷತ್ ಟಿಕೆಟ್ ಅಲ್ಪಸಂಖ್ಯಾತರಿಗೆ ನೀಡಬೇಕೆಂಬ ವಾದ ಮುನ್ನೆಲೆಗೆ ಬಂದಿದೆ.
ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಇಸ್ಮಾಯಿಲ್ ತಮಾಟಗಾರ,ಮಾಜಿ ಸಂಸದ ಪ್ರೋ.ಐ.ಜಿ.ಸನದಿ, ಶಾಕೀರ ಸನದಿ ಅಲ್ಪಸಂಖ್ಯಾತರ ಕೋಟಾದಡಿ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ಕಳೆದ ಎರಡು ಅವಧಿಗೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಗೆ ಟಿಕೆಟ್ ಬಹುತೇಕ ಪೈನಲ್ ಎನ್ನಲಾಗುತ್ತಿದೆ.
ಇತ್ತ ಬಿಜೆಪಿಯಲ್ಲೂ ಇದೆ ತುರುಸು ಕಂಡು ಬರುತ್ತಿದ್ದು, ಹಾಲಿ ಪ್ರದೀಪ ಶೆಟ್ಟರ್ ಸದಸ್ಯರಾಗಿದ್ದು, ಅವರಿಗೆ ಟಿಕೆಟ್ ನೀಡಲಾಗುವುದು ಎಂಬ ಮಾತು ಕೇಳಿ ಬರುತ್ತಿದ್ದೆ. ಆದರೆ ಬ್ಯಾಡಗಿಯ ಮಾಜಿ ಶಾಸಕ ಸುರೇಶ ಗೌಡ ಪಾಟೀಲ ಪುತ್ರ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದಾರೆ. ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಮುಂತಾದವರು ಆಕಾಂಕ್ಷಿಗಳಾಗಿದ್ದಾರೆ. ಪ್ರದೀಪ ಶೆಟ್ಟರ್ ಕಲಘಟಗಿಯತ್ತ ಉತ್ಸುಕರಾಗಿದ್ದಾರೆ ಎಂಬುವಂತ ಮಾತುಗಳು ಕೇಳಿ ಬರುತ್ತಿವೆ.
ಟಿಕೆಟ್ ವಿಚಾರವಾಗಿ ದಾವಣಗೆರೆಯ ಕಾರ್ಯಕಾರಿಣಿ ಸಭೆಯಲ್ಲಿ ಒಂದು ಸುತ್ತಿನ ಮಾತುಕತೆ ಮುಗಿದಿದೆ. ಈಗ ಮತ್ತೆ ಬಿಜೆಪಿ ಪಾಳಯದಲ್ಲಿ ಸಭೆ ನಡೆಯುತ್ತಿದ್ದು , ಕುಟುಂಬ ರಾಜಕಾರಣಕ್ಕೆ ಮಣೆ ಹಾಕದೆ ಹಾನಗಲ್ ನಲ್ಲಿ ಉದಾಸಿ ಕುಟುಂಬಕ್ಕೆ ಟಿಕೆಟ್ ತಪ್ಪಿಸಿದಂತೆ, ಶೆಟ್ಟರ್ ಕುಟುಂಬಕ್ಕೆ ಟಿಕೆಟ್ ನೀಡದೆ ಹೊಸ ಮುಖಗಳಿಗೆ ಟಿಕೆಟ್ ನೀಡಿದ್ರು ಆಶ್ಚರ್ಯವಿಲ್ಲ.
Kshetra Samachara
17/11/2021 06:51 pm