ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಣ್ಣ ಗುತ್ತಿಗೆದಾರರ ಬಿಲ್ ಬಿಡುಗಡೆ ಮಾಡುವಂತೆ ಮನವಿ

ಹುಬ್ಬಳ್ಳಿ: ಕಳೆದ ಮೂರು ವರ್ಷಗಳಿಂದ ಸಣ್ಣ ಸಣ್ಣ ಗುತ್ತಿಗೆದಾರರ ಬಿಲ್ ಬಿಡುಗಡೆಯಾಗದ ಹಿನ್ನೆಲೆಯಲ್ಲಿ, ಇಂದು ಜೈ ಭೀಮ ಯುವ ಸಂಘಟನೆಯ ವತಿಯಿಂದ ಆದಷ್ಟು ಬೇಗ ಬಿಲ್ ಬಿಡುಗಡೆ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಮಹಾನಗರ ಪಾಲಿಕೆ ಕಚೇರಿ ಎದುರುಗಡೆ ಪ್ರತಿಭಟನೆ ಮಾಡಿದ ಅವರು, ಲಾಕ್ ಡೌನ್ ನಿಂದಾಗಿ ಬಹಳಷ್ಟು ಸಣ್ಣ ಸಣ್ಣ ಗುತ್ತಿಗೆದಾರರ ಪರಿಸ್ಥಿತಿ ತುಂಬಾ ಕಷ್ಟದಾಯಕವಾಗಿದೆ, ಹೀಗಾಗಿ ಬಿಲ್ ಬಿಡುಗಡೆ ಮಾಡುವಂತೆ ಕಳೆದ 6 ತಿಂಗಳ ಹಿಂದೆ ಮನವಿಯನ್ನು ಮಾಡಿಕೊಂಡರು ಕೂಡಾ ಯಾವುದೇ ಪ್ರಯೋಜವಾಗಿಲ್ಲ, ಹೀಗಾಗಿ ಇಂದು ಕೂಡಾ ಬಿಲ್ ಬಿಡುಗಡೆ ಮಾಡುವಂತೆ ಮನವಿ ನೀಡಿದರು. ಒಂದು ವೇಳೆ ಬಿಲ್ ಬಿಡುಗಡೆ 10 ದಿನದ ಒಳಗೆ ಮಾಡದೆ ಹೋದಲ್ಲಿ ಪಾಲಿಕೆಯ ಮುಂಭಾಗದಲ್ಲಿ ಧರಣಿ ಕೂರುತ್ತೆವೆ ಎಂದು ಜೈ ಭೀಮ ಯುವ ಸಂಘಟನೆಯ ಕಾರ್ಯಕರ್ತರು ಹಾಗೂ ಸಣ್ಣ ಗುತ್ತಿಗೆದಾರರು ಎಚ್ಚರಿಕೆಯನ್ನು ನೀಡಿದರು.

Edited By : Shivu K
Kshetra Samachara

Kshetra Samachara

08/11/2021 02:23 pm

Cinque Terre

12.7 K

Cinque Terre

0

ಸಂಬಂಧಿತ ಸುದ್ದಿ