ಕುಂದಗೋಳ : ಕಳೆದ ಒಂದೂವರೆ ವರ್ಷದ ಹಿಂದೆ ಕುಂದಗೋಳ ಪಟ್ಟಣದ ಮತದಾರರು ನಮ್ಮ ಪರವಾಗಿ ಭಾರತೀಯ ಜನತಾ ಪಾರ್ಟಿ ಪರವಾಗಿ ತೀರ್ಪು ನೀಡಿದ್ದಾರೆ. ಆದರೆ ಮೂವರು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯರು ಯಾರದ್ದೋ ಕುಮ್ಮಕ್ಕಿನಿದ್ದ ವಿಪ್ ಜಾರಿಯಾದರೂ ಉಲ್ಲಂಘಿಸಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಅವರು ಕುಂದಗೋಳ ಪಟ್ಟಣ ಪಂಚಾಯಿತಿ ಚುನಾವಣೆಗೆ ನಿರ್ಣಾಯಕ ಮತ ಚಲಾಯಿಸಿ ಹೊರಬಂದು ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಉದ್ದೇಶಿಸಿ ಮಾತನಾಡಿ ಮುಂಬರುವ ದಿನಗಳಲ್ಲಿ ವಿಪ್ ಉಲ್ಲಂಘಿಸಿದ ಮೂರು ಕ್ಷೇತ್ರಕ್ಕೂ ಚುನಾವಣೆ ನಡೆಯುತ್ತದೆ, ಈಗಾಗಲೇ ಪಕ್ಷದ ನಿಯಮ ಮೀರಿದ ಮೂವರು ಸದಸ್ಯರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ನಮ್ಮ ಜಿಲ್ಲಾ ಘಟಕ ತಕ್ಕ ಕ್ರಮ ಕೈಗೊಳ್ಳಲು ನಾವೂ ಸೂಚಿಸಿದ್ದೇವೆ ನಾವು ಗೆಲುವು ಕಂಡಿದ್ದೇವೆ ಈ ಕಾರಣ ನಾನು ಇಲ್ಲಿಗೆ ಬರಬೇಕಾಯಿತು ಎಂದರು.
ಇನ್ನೂ ದಿಡೀರ್ ತೈಲ ಬೆಲೆ ಇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು ಅಂತಾರಾಷ್ಟ್ರೀಯ ತೈಲ ಬೆಲೆ ದಿನೇ ದಿನೇ ಏರಿಕೆ ಆಗುತ್ತಿದ್ದು ಎಲ್ಲ ರಾಜ್ಯಗಳ ಜೊತೆ ಮಾತನಾಡಿ ಇಂಧನ ಬೆಲೆ ಇಳಿಕೆ ಮಾಡಿದ್ದೇವೆ ಎಂದರು. ಯಾವಾಗ ? ಇಂಧನ ಬೆಲೆ ಏರಿಕೆ ಆಯ್ತೋ ಅವಾಗ ಚರ್ಚೆ ಪ್ರಾರಂಭವಾಯ್ತು ಈಗ ಇಳಿಕೆ ಆಗಿದೆ. ವಿರೋಧ ಪಕ್ಷ ಉಪಚುನಾವಣೆ ಆರೋಪದಲ್ಲಿ ಹುರಳಿಲ್ಲಾ 29 ಉಪಚುನಾವಣೆಯಲ್ಲಿ ಬಿಜೆಪಿ 12 ರಲ್ಲಿ ಗೆದ್ದಿದೆ ಎಂದರು.
Kshetra Samachara
06/11/2021 07:26 pm