ಕುಂದಗೋಳ : ಬಹಳ ಕುತೂಹಲ ಕೆರಳಿಸಿದ್ದ ಕುಂದಗೋಳ ಪಟ್ಟಣ ಪಂಚಾಯಿತಿ ಚುನಾವಣೆ ಇಂದು ಆರಂಭವಾಗಿದ್ದು, ಚುನಾವಣೆ ಕೊಠಡಿ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಈ ಹಿಂದೆ 12 ಸದಸ್ಯರ ಮೂಲಕ ಪಟ್ಟಣ ಪಂಚಾಯಿತಿ ಗದ್ದುಗೆ ಏರಿದ್ದ ಬಿಜೆಪಿ ಹಾಲಿ ಅಧ್ಯಕ್ಷರ ರಾಜೀನಾಮೆ ಬಳಿಕ ಮತ್ತೋಮ್ಮೆ ಚುನಾವಣೆ ಏರ್ಪಟ್ಟಿದ್ದು, ಬಿಜೆಪಿ 12 ಸದಸ್ಯರ ಪೈಕಿ 3 ಜನ ಸದಸ್ಯರು ಪಕ್ಷದಿಂದ ವಿಪ್ ಜಾರಿಯಾದರೂ ಬೇರೆ ಪಕ್ಷದ ಸಂಪರ್ಕದಲ್ಲಿದ್ದಾರೆ ಎಂಬ ಊಹಾಪೋಹ ಹರಿದಾಡುತ್ತಿರುವ ಕಾರಣ ಇಂದಿನ ಚುನಾವಣೆ ಬಹಳ ಕುತೂಹಲ ಕೆರಳಿಸಿದೆ.
ಇನ್ನೂ ಚುನಾವಣೆ ಅತಿ ಶಿಸ್ತುಬದ್ಧವಾಗಿ ಚುನಾವಣಾಧಿಕಾರಿ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ನೇತೃತ್ವದಲ್ಲಿ ನಡೆಯುತ್ತಿದ್ದು, ಇತ್ತ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದವರು ಕೊಠಡಿ ಹೊರಗೆ ಕುತೂಹಲಕಾರಿ ಕಾಯ್ದು ನಿಂತಿದ್ದಾರೆ. ಇದರ ನಡುವೆ ಬಿಜೆಪಿಯವರಂತೆ ನಮ್ಮನ್ನೂ ಒಳಗೆ ಹಗಲು ಅವಕಾಶ ಕೊಡಿ ಎಂದು ಕಾಂಗ್ರೆಸ್ ಮುಖಂಡರು ಪೊಲೀಸರ್ ಜೊತೆ ಮಾತಿನ ಚಕಮಕಿ ನಡೆಸಿದ ಪ್ರಸಂಗ ಜರುಗಿತು.
Kshetra Samachara
06/11/2021 01:09 pm